ಆರ್ಥಿಕವಾಗಿ ಹಿಂದುಳಿದ ಹಾಗೂ ದೈಹಿಕ ಅಸಮರ್ಥತೆಯಿಂದ ಶಿಕ್ಷಣ ಸೇರಿದಂತೆ ಉದ್ಯೋಗ ಅವಕಾಶಗಳಿಂದ ವಂಚಿತರಾಗುತ್ತಿರುವ ಮಂದಿಗಾಗಿ ಉನ್ನತಿ ಸಂಸ್ಥೆಯು 70 ದಿನಗಳ ಉಚಿತ ತರಬೇತಿ ಆರಂಭಿಸಿದೆ.
ಶಿಕ್ಷಣ ಪಡೆಯಲಾಗದ, ಪಡೆದರೂ ಉದ್ಯೋಗ ಸಿಗದೆ ಅಸಹಾಯಕರಾಗಿರುವ ಅಥವಾ ಉದ್ಯೋಗಕ್ಕಾಗಿ ಬೀದಿ ಬೀದಿ ಅಲೆಯುವ ಲಕ್ಷಾಂತರ ಮಂದಿ ನಮ್ಮ ನಡುವೆ ಇದ್ದಾರೆ. ಅದರಲ್ಲೂ ದೈಹಿಕವಾಗಿ ಅಸಮರ್ಥರಾಗಿರುವ, ಬೇರೆಯವರನ್ನು ಅವಲಂಬಿಸಿರುವ ವಿದ್ಯಾರ್ಥಿಗಳಿಗಾಗಿ ಈ ತರಬೇತಿ ಆಯೋಜಿಸಲಾಗಿದೆ.
ಇಲ್ಲಿ ಮಾರುಕಟ್ಟೆ ವ್ಯವಹಾರ, ಕಚೇರಿ ನಿರ್ವಹಣೆ, ಅತಿಥಿ ಸತ್ಕಾರ, ವಾಹನ ಚಾಲನಾ ತರಬೇತಿ, ಹೊಲಿಗೆ ತರಬೇತಿ, ಇಂಡಸ್ಟ್ರಿಯಲ್ ಪೇಂಟಿಂಗ್ ಹಾಗೂ ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ.
ತರಬೇತಿ ಪಡೆದವರಿಗೆ ಉದ್ಯೋಗದ ಅವಕಾಶ ಕಲ್ಪಿಸಿಕೊಡಲಿದೆ. ಎಪ್ಪತ್ತು ದಿನಗಳಂತೆ ಒಂದು ತಂಡಕ್ಕೆ ತರಬೇತಿ ನೀಡಲಾಗುತ್ತದೆ. ಈಗಾಗಲೇ 2530 ಮಂದಿ ತರಬೇತಿ ಪಡೆದಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ಟ್ರಸ್ಟೀ ರಮೇಶ ಸ್ವಾಮಿ.
ತರಬೇತಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಉಚಿತ ವಾಸ್ತವ್ಯ ಹಾಗೂ ಊಟದ ವ್ಯವಸ್ಥೆಯನ್ನೂ ಸಂಸ್ಥೆ ಮಾಡಿದೆ. 18 ವರ್ಷ ಮೇಲ್ಪಟ್ಟವರಿಗೆ ಅವಕಾಶ. ಯಾವುದೇ ವಿದ್ಯಾರ್ಹತೆಯಿಲ್ಲ.
ಶ್ರೀ ಗರುವಾಯೂರಪ್ಪ ಭಜನ್ ಸಮಾಜ್ ಟ್ರಸ್ಟ್ ಆಯೋಜಿಸುವ `ಉತ್ಸವ್~, `ಶಿಕ್ಷಾ~, ಕಾರ್ಯಕ್ರಮಗಳಿಂದ ಬರುವ ಆದಾಯವನ್ನು ಉನ್ನತಿ ಸಂಸ್ಥೆಗೂ ವಿನಿಯೋಗಿಸಲಾಗುತ್ತದೆ.
2003ರಲ್ಲಿ ಆರಂಭವಾದ ಉನ್ನತಿ ಸಂಸ್ಥೆಯು ಅಂದಿನಿಂದ ಇಂದಿನವರೆಗೆ ಹಿಂದುಳಿದ, ದೈಹಿಕ ಅಸಮರ್ಥರಿರುವ ನಿರುದ್ಯೋಗಿಗಳಿಗಾಗಿ ಉಚಿತ ತರಬೇತಿ ನೀಡುವ ಕೈಂಕರ್ಯ ಮಾಡಿಕೊಂಡು ಬಂದಿದೆ.
ಜುಲೈ 7ರಿಂದ ಸಂದರ್ಶನ ಆಯೋಜಿಸಿದ್ದು, ಆಸಕ್ತರು ಕರೆ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಮಾಹಿತಿ ಹಾಗೂ ನೋಂದಣಿಗೆ: 2538 4443, 2538 4642, 98863 28649.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.