ADVERTISEMENT

ದೋಬಿ ಘಾಟ್‌ನಲ್ಲಿ ಒಂದಿನ

ಪ್ರಜಾವಾಣಿ ಚಿತ್ರ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ಪಿಕ್ಚರ್ ಪ್ಯಾಲೆಸ್

ಎಲ್ಲೆಲ್ಲಿಂದಲೋ ರಾಶಿ ಬಟ್ಟೆಗಳು ಅಲ್ಲಿಗೆ ಬರುತ್ತವೆ. ಕೆಲವರು ಮೂಟೆಗಳಲ್ಲಿ ಗಂಟುಕಟ್ಟಿ ತರುತ್ತಾರೆ. ಒಗೆಯುವುದು ಇಲ್ಲಿನವರ ನಿತ್ಯ ಕಾಯಕ. ದೊಡ್ಡ ಬೆಟ್‌ಶೀಟ್‌ಗಳು, ಬಸ್‌ಗಳಲ್ಲಿ ಸೀಟುಗಳಿಗೆ ಹಾಕುವ ಕವರ್‌ಗಳು, ಬಣ್ಣಬಣ್ಣದ ಅಂಗಿ, ಸೀರೆ, ಜುಬ್ಬ ಹೀಗೆ ಯಾರ‌್ಯಾರವೋ ಬಟ್ಟೆಗಳು ಅಲ್ಲಿ ಒಂದೆಡೆ ಸ್ವಚ್ಛಗೊಂಡು ಒಣಗುತ್ತವೆ. ಅಷ್ಟೇ ಅಲ್ಲ, ತಮ್ಮ ಸಂಪ್ರದಾಯದ ಕುರುಹೆಂಬಂತೆ ಅಲ್ಲಿ ಕರ್ಮಿಗಳು ಕತ್ತೆಗಳನ್ನೂ ಸಾಕುತ್ತಿದ್ದಾರೆ. ಆದರೆ ಅವು ಬಟ್ಟೆಯನ್ನೇನೂ ಹೊರುವುದಿಲ್ಲ. ಮಲ್ಲೇಶ್ವರದ ದೋಬಿ ಘಾಟ್‌ನಲ್ಲಿನ ಈ ಚಿತ್ರಗಳು ಸಾವಿರ ಪದಗಳ ಚಿತ್ರಲೇಖನಕ್ಕೆ ಸಮವಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT