ADVERTISEMENT

ಪಿಕ್ಚರ್ ಪ್ಯಾಲೆಸ್ ; ರವಿ ಪುಳಕ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ಸೂರ್ಯನಿಗೂ ಈಗ ಚಳಿ. ಅವನು ಏಳುವುದೂ ತಡವೇ. ಹಿಮ ಪದರಗಳ ನಡುವೆ ಕಿರಣಗಳ ತೂರುತ್ತಾ ಬೆಂಕಿ ಕಾಯಿಸಿ ಕೂತವರಿಗೆ `ಇರಿ, ನಾ ಬಂದೆ' ಎನ್ನುವ ರವಿರಾಯನೂ ಚಳಿಯಲ್ಲಿ ಪುಳಕಗೊಂಡವನಂತೆಯೇ ಇಣುಕುತ್ತಾನೆ.

ಕಬ್ಬನ್ ಉದ್ಯಾನದಲ್ಲಿ ಅದಾಗಲೇ ಜೆರ್ಸಿ ತೊಟ್ಟವರು ಬಿರುಸಿನ ನಡಿಗೆಯನ್ನೋ, ಓಟವನ್ನೋ ಮುಗಿಸುವ ಹಂತಕ್ಕೆ ಬಂದಿರುವುದನ್ನು ಅವನು ನೋಡಿ ಆನಂದತುಂದಿಲನಾಗುತ್ತಾನೆ. ಹಸಿರು ಹಾಸಿನ ನಡುವೆ ಅಲ್ಲಲ್ಲಿ ಮೂಡುವ ಬಿಸಿಲುಕೋಲುಗಳೆ ಸೂರ್ಯನ ನಗುವಿನ ಸಂಕೇತಗಳು. ಚಳಿಗಾಲದ ಈ ಚಿತ್ರಗಳೇ ರವಿ ಪುಳಕಕ್ಕೆ ಕನ್ನಡಿ ಹಿಡಿಯುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.