ADVERTISEMENT

ಪ್ರೇಕ್ಷಕರ ನಡುವೆ ‘ಡಿಕೆಡಿ ಲಿಟ್ಲ್‌ ಮಾಸ್ಟರ್ಸ್‌’

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:30 IST
Last Updated 25 ಮೇ 2018, 19:30 IST

‘ಜೀ ಕನ್ನಡ’ ವಾಹಿನಿಯು ಡಾನ್ಸ್ ರಿಯಾಲಿಟಿ ಶೋ ‘ಡಾನ್ಸ್ ಕರ್ನಾಟಕ ಡಾನ್ಸ್ (ಡಿಕೆಡಿ) ಲಿಟ್ಲ್ ಮಾಸ್ಟರ್ಸ್’ ಕಾರ್ಯಕ್ರಮವನ್ನು ಪ್ರೇಕ್ಷಕರ ನಡುವೆಯೇ ಆರಂಭಿಸಲು ತೀರ್ಮಾನಿಸಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವವರು ವಾಹಿನಿಯ ಎಂ.ಜಿ. ರಸ್ತೆಯ ಕಚೇರಿಯಲ್ಲಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯ ನಡುವೆ ಪಾಸ್‌ ಪಡೆಯಬಹುದು. ಮೊದಲು ಬಂದವರಿಗೆ ಆದ್ಯತೆ ಆಧಾರದಲ್ಲಿ ಪಾಸ್ ನೀಡಲಾಗುವುದು ಎಂದು ವಾಹಿನಿ ಹೇಳಿದೆ.

‘ಡಿಕೆಡಿ ಲಿಟ್ಲ್‌ ಮಾಸ್ಟರ್ಸ್‌’ ಕಾರ್ಯಕ್ರಮ ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಬೆಂಗಳೂರಿನ ‘ಮಾನ್ಯತಾ ಎಂಬಸಿ ಬ್ಯುಸಿನೆಸ್ ಪಾರ್ಕ್ ಕ್ಯಾಂಪಸ್‍’ನ ವೈಟ್ ಆರ್ಕಿಡ್‍ನಲ್ಲಿ ನಡೆಯಲಿದೆ. ಮೂರು ಗಂಟೆಯೊಳಗೆ ವೈಟ್‌ ಆರ್ಕಿಡ್‌ಗೆ ಬಂದು ಪಾಸ್‌ ಪಡೆಯುವ ಅವಕಾಶ ಕೂಡ ಇದೆ.

ADVERTISEMENT

‘ಡಿಕೆಡಿ ಲಿಟ್ಲ್ ಮಾಸ್ಟರ್ಸ್‍’ನಲ್ಲಿ, ‘ಸರೆಗಮಪ ಲಿಟ್ಲ್ ಚಾಂಪ್ಸ್’, ‘ಡ್ರಾಮಾ ಜೂನಿಯರ್ಸ್ 1 ಮತ್ತು 2ನೇ ಸೀಸನ್‌’ ಹಾಗೂ ‘ಜೋಡಿ ಹಕ್ಕಿ’ ಮತ್ತು ‘ಗಂಗಾ’ ಧಾರಾವಾಹಿಗಳ ಬಾಲಪ್ರತಿಭೆಗಳು ಭಾಗವಹಿಸಲಿವೆ. ಅನುಶ್ರೀ ಕಾರ್ಯಕ್ರಮ ನಿರೂಪಕಿ ಆಗಿರಲಿದ್ದಾರೆ. ವಿಜಯ್ ರಾಘವೇಂದ್ರ, ರಕ್ಷಿತಾ ಮತ್ತು ಅರ್ಜುನ್ ಜನ್ಯ ತೀರ್ಪುಗಾರರಾಗಿರುತ್ತಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿ ಜೋಡಿಗೂ ಕನ್ನಡ ಚಿತ್ರರಂಗದ ಖ್ಯಾತ ನೃತ್ಯ ನಿರ್ದೇಶಕರಿಂದ ತರಬೇತಿ ನೀಡಲಾಗುತ್ತದೆಯಂತೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇನ್ನೊಂದು ಕಾರಣ ಇದೆ. ಸ್ಥಳದಲ್ಲಿ ನಡೆಯುವ ಲಕ್ಕಿ ಡ್ರಾದಲ್ಲಿ ಗೆಲ್ಲುವವರಿಗೆ ಬಜಾಜ್ ದ್ವಿಚಕ್ರ ವಾಹನ ಬೈಕ್ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.