ADVERTISEMENT

ಬೇಸಿಗೆ ಬೇಗೆ ನೀಗುವ ಬಗೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST
ಬೇಸಿಗೆ ಬೇಗೆ ನೀಗುವ ಬಗೆ
ಬೇಸಿಗೆ ಬೇಗೆ ನೀಗುವ ಬಗೆ   

ಬೆಂಗಳೂರು ಬೇಸಿಗೆ ಎದುರಿಸಲು ಸಿದ್ಧವಾಗುತ್ತಿದೆ. ಬೇಸಿಗೆಯ ಬೇಗೆ ತೀರಿಸಲು ಹಲವಾರು ಮಳಿಗೆಗಳು ಈಗಾಗಲೇ ಗ್ರಾಹಕರನ್ನು ಸೆಳೆಯುತ್ತಿವೆ.

ಕಣ್ಮಿಂಚುವ ಬಿಸಿಲಿಗೊಂದು ತಂಪು ಕನ್ನಡಕ ನೀಡುವ ಹೊಣೆಯನ್ನು ಜಿಕೆಬಿ ಆಪ್ಟಿಕಲ್ಸ್ ಹೊತ್ತುಕೊಂಡಿದೆ. ರೇಬಾನ್, ಓಕ್ಲೆ, ಟಾಮ್ಮಿ ಹಿಲ್ಫಿಗರ್, ವೋಗ್ ಮುಂತಾದ ಅಂತರರಾಷ್ಟ್ರೀಯ ಬ್ರಾಂಡ್‌ಗಳ ಕನ್ನಡಕಗಳ ಸಂಗ್ರಹವನ್ನೇ ಬೆಂಗಳೂರಿಗರಿಗೆ ನೀಡುತ್ತಿದೆ.
 
ಮಾರ್ಚ್ ತಿಂಗಳಿನಲ್ಲಿ 2012ನೇ ವರ್ಷಕ್ಕಾಗಿಯೇ ಸಿದ್ಧ ಪಡಿಸಿರುವ ನೂತನ ಸಂಗ್ರಹವನ್ನು ಪರಿಚಯಿಸಲಾಗುತ್ತಿದೆ ಎಂದೂ ಜಿಕೆಬಿ ಪ್ರಚಾರ ಮಾಡುತ್ತಿದೆ.
 
ಹೆಚ್ಚಿನ ಮಾಹಿತಿಗೆ ಲಾಗಿನ್ ಆಗಿ www.gkboptical.com
ತಂಪು ಕನ್ನಡಕದ ನಂತರ ತಂಪು ಪಾನೀಯದ ಸರದಿ. ದಾಹ ಅಡಗಿಸಿ, ಕಂಠದಿಂದ ನಾಭಿಯಾಳಕ್ಕೂ ತಂಪು ನೀಡುವ ಎಳನೀರು ಮಾರಾಟ ಭರಾಟೆಯಲ್ಲಿರುತ್ತದೆ. ಇದೇ ಎಳನೀರು ಹಾಗೂ ಗಂಜಿಯನ್ನು ಬಳಸಿ, ನಗರದ ಮಮ್ಮಮಿಯಾ ಟೆಂಡರ್ ಕೊಕೊನಟ್ ಗೆಲಾಟೊ ನೀಡುತ್ತಿದೆ. ಶೇ 96ರಷ್ಟು ಫ್ಯಾಟ್ ಫ್ರೀ ಎಂದೂ ಹೇಳಿಕೊಂಡಿದೆ.

ಇಂದಿರಾ ನಗರ ಹಾಗೂ ಕೋರಮಂಗಲದ ಮಮ್ಮಮಿಯಾ ಮಳಿಗೆಯಲ್ಲಿ ಈ ಸ್ಕೂಪು ಲಭ್ಯವಿದೆ. ಬೆಲೆ ಪ್ರತಿ ಸ್ಕೂಪ್‌ಗೆ 49 ರೂಪಾಯಿಗಳು.
ಮಾಹಿತಿಗೆ 9379416398

ಕಣ್ಣಿಗಾಯಿತು. ಹೊಟ್ಟೆಗಾಯಿತು. ತ್ವಚೆಯ ರಕ್ಷಣೆಗೇನು? ನೋ ಮಾರ್ಕ್ಸ್ ಯೂತ್ ರೇಂಜ್ ಅನ್ನು ಪರಿಚಯಿಸಿದೆ. ಬೇಸಿಗೆಯಲ್ಲಿ ತ್ವಚೆಯ ತೇವಾಂಶವನ್ನು ಕಾಯ್ದಿಡಲಾಗುತ್ತದೆ. ದೂಳು, ಮಾಲಿನ್ಯ ಹಾಗೂ ಪ್ರಖರ ಸೂರ್ಯನಿಂದಾಗಿ ತ್ವಚೆಯು ತನ್ನ ತಾಜಾತನ ಕಳೆದುಕೊಳ್ಳುತ್ತದೆ. ಮುಖದ ಮೇಲೆ ಗುಳ್ಳೆಗಳಾಗುತ್ತವೆ.

ಇದನ್ನೆಲ್ಲ ತಡೆಯಲು ನೋಮಾರ್ಕ್ಸ್‌ನ ಉತ್ಪನ್ನಗಳು ಸಹಾಯಕವಾಗಿವೆ ಎಂದು ಕಂಪೆನಿ ಹೇಳಿಕೊಂಡಿದೆ. ಸೂರ್ಯನ ಝಳಕ್ಕೆ ಬಾಡುವ ಚರ್ಮದ ಪೋಷಣೆಗೆ ನೋಮಾರ್ಕ್ಸ್‌ನ ಸೋಪನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ.

ಇದರಲ್ಲಿರುವ ಪುದಿನಾದ ಅಂಶವು ಚರ್ಮವನ್ನು ತಂಪುಗೊಳಿಸುತ್ತದೆ. ಲವಂಗದೆಣ್ಣೆಯು ಗಾಯಗಳಾಗದಂತೆ ತಡೆಯುತ್ತದೆ. ನಿಂಬೆ ರಸವು ಹೆಚ್ಚುವರಿ ತೈಲ ಶೇಖರವಾಗದಂತೆ ನಿಯಂತ್ರಿಸುತ್ತದೆ ಎಂದೆಲ್ಲ ನೋಮಾರ್ಕ್ಸ್ ಹೇಳಿಕೊಂಡಿದೆ.

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇವು ಸಹಾಯಕ ಎನ್ನುವುದು ಅವರ ಭರವಸೆ. ಫೇಸ್‌ವಾಶ್ 60 ರೂಪಾಯಿ. ಸೋಪಿಗೆ 30 ರೂಪಾಯಿಗಳು. ಎಲ್ಲ ಪ್ರಮುಖ ಅಂಗಡಿಗಳಲ್ಲೂ ಲಭ್ಯ ಇವೆ.

ಇನ್ನು ಬೇಸಿಗೆಯಲ್ಲಿ ಹೆಗಲಿಗೇರಿಸುವ ಬ್ಯಾಗು ಎಂಥದ್ದಿರಬೇಕು? ದಾ ಮಿಲಾನೋಸ್ ಬೇಸಿಗೆ ಸಂಗ್ರಹವನ್ನೇ ಹೊರತಂದಿದೆ. ಗಾಢ ವರ್ಣಗಳೊಂದಿಗೆ ಅಚ್ಚ ಬಿಳುಪಿನ ಬ್ಯಾಗುಗಳನ್ನು ವಿನ್ಯಾಸಗೊಳಿಸಿದೆ.

ಚರ್ಮದ ಉತ್ಪನ್ನವಲ್ಲದಿದ್ದರೆ ಬಿಸಿಲಿನ ಬೇಗೆಗೆ ಅವು ಹರಡಿಕೊಳ್ಳುತ್ತವೆ. ಬರ ಬಿದ್ದಾಗ ಭೂಮಿ ಬಿರಿಯುವಂತೆ ಬ್ಯಾಗುಗಳೂ ಬಿರಿಯುತ್ತವೆ. ಬಿಸಿಲಿನ ಬೇಗೆ ತಡೆಯಬಹುದಾದ ಅಪ್ಪಟ ಚರ್ಮದ ಬ್ಯಾಗುಗಳನ್ನು ಉತ್ಪಾದಿಸಲಾಗಿದೆ ಎಂದು ಮಿಲಾನೋಸ್ ಹೇಳಿಕೊಂಡಿದೆ.
ಕೆಂಪು, ನೀಲಿ, ಹಳದಿ, ಆಶ್ಟ್ರಿಚ್, ಬಿಳಿ ಬಣ್ಣದ ಬ್ಯಾಗುಗಳಿಗೆ, ಚೈನು, ಚಿನ್ನ ಲೇಪಿತ ಹ್ಯಾಂಡಲ್‌ಗಳಿರುವಂತೆ ವಿನ್ಯಾಸಗೊಳಿಸಲಾಗಿದೆ. ಯುವತಿಯರಂತೆ ನಾಜೂಕಿನ, ನಯವಾದ ಈ ಬ್ಯಾಗುಗಳ ಸಂಗ್ರಹವನ್ನು ಇಟಾಲಿಯನ್ ಲೆದರ್‌ನಿಂದ ಸಿದ್ಧ ಪಡಿಸಲಾಗಿದೆ.

ದಾ ಮಿಲಾನೊ ಬೂಟಿಕ್‌ಗಳಲ್ಲಿ ಈ ಬ್ಯಾಗುಗಳು ಲಭ್ಯ. ಬೆಲೆ 2999ರೂಪಾಯಿಯಿಂದ ಆರಂಭವಾಗುತ್ತದೆ. ಬಿಸಿಲಿನ ಬೇಗೆ ಸಹಿಸುವ ಬಗೆಗೆ ಗ್ರಾಹಕರನ್ನು ಮಾರುಕಟ್ಟೆ ಸೆಳೆಯುತ್ತಲೇ ಇದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.