ADVERTISEMENT

ಮಧುಮೇಹಿಗಳ ಸಿಹಿ ತಿಂಡಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST

ಮಧುಮೇಹಿಗಳೂ ಬಳಸಬಹುದಾದಂಥ, ಕಡಿಮೆ ಕ್ಯಾಲೊರಿಯ ‘ಬದಲಿ ಸಕ್ಕರೆ’ ಬ್ರಾಂಡ್ ‘ರೆಲಿಷ್’, ಕಂಟೋನ್ಮೆಂಟ್‌ನ ವಾಸವಿ ಮಹಿಳಾ ಮಂಡಳಿ ಸಹಯೋಗದಲ್ಲಿ ಸಿಹಿ ತಿನಿಸು ತಯಾರಿಕಾ ಸ್ಪರ್ಧೆ ಏರ್ಪಡಿಸಿತ್ತು.

ಮಂಡಳಿಯ ಸುಮಾರು 100 ಸದಸ್ಯೆಯರು ಪಾಲ್ಗೊಂಡು ರೆಲಿಷ್ ಸಕ್ಕರೆಯಲ್ಲಿ ಬಗೆಬಗೆಯ ಹಲ್ವ, ಬರ್ಫಿ, ಹೋಳಿಗೆ, ಸ್ಪಿನಾಚಿ, ಡೆಸರ್ಟ್, ಪಪ್ಪಾಯಿ ಡಿಲೈಟ್, ಬೀಟ್ ರೂಟ್ ಹಲ್ವ, ನೆಲ್ಲಿಕಾಯಿ ಒಬ್ಬಟ್ಟು ಸೇರಿದಂತೆ 100 ಬಗೆಯ ಸಿಹಿ ತಿಂಡಿಗಳನ್ನು ಪ್ರದರ್ಶಿಸಿದರು.

ಇವುಗಳ ರುಚಿ ಕೂಡ ಸಾಮಾನ್ಯ ಸಕ್ಕರೆ -ಬೆಲ್ಲದಲ್ಲಿ ತಯಾರಿಸಿದ ತಿನಿಸುಗಳಂತೇ ಇತ್ತು. 10 ಅತ್ಯುತ್ತಮ ಸಿಹಿ ತಿಂಡಿಗೆ ಮೊದಲ 10 ಬಹುಮಾನ, ಉಳಿದ ತಿನಿಸುಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಮಂಡಳಿ ಅಧ್ಯಕ್ಷ ಲಲಿತಾ ಹರೇಂದ್ರ ಅವರು ರೆಲಿಷ್‌ನ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ದಪ್ಪ ದೇಹದವರು, ಮಧುಮೇಹ ಪೀಡಿತರು ಕೂಡ ಆರೋಗ್ಯದ ಸಮಸ್ಯೆ ಇಲ್ಲದೆ ಎಲ್ಲರಂತೆ ಹಬ್ಬ ಹರಿದಿನಗಳಲ್ಲಿ ಸಿಹಿ ತಿಂಡಿ ಸೇವಿಸಬಹುದು ಎಂಬುದನ್ನು ಮನವರಿಕೆ ಮಾಡಲು ರೆಲಿಷ್ ಇಂಥ ಸ್ಪರ್ಧೆಗಳನ್ನು ಏರ್ಪಡಿಸುತ್ತಿದೆ.

ತಮ್ಮ ಸದಸ್ಯರಿಗಾಗಿ ರೆಲಿಷ್ ಸ್ವೀಟ್ ಮೇಕರ್‌ನಿಂದ ಸಿಹಿ ತಿಂಡಿ ತಯಾರಿಸುವ ಸ್ಪರ್ಧೆ ಏರ್ಪಡಿಸಲು ಬಯಸುವ ಮಹಿಳಾ ಮಂಡಳಿಗಳು 92431 37390 ಸಂಪರ್ಕಿಸಬಹುದು. g

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.