ADVERTISEMENT

ರಂಗಸಂಗಮ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:30 IST
Last Updated 20 ಜನವರಿ 2012, 19:30 IST

ರಾಜ್ಯ ಸಮುದಾಯ ಸಮನ್ವಯ ಸಮಿತಿ: ಶನಿವಾರ ಸಂಸ್ಕೃತಿ ಸಾಮರಸ್ಯ ಸಮುದಾಯ ರಂಗ ಸಂಗಮ ಕಾರ್ಯಕ್ರಮ. ಉದ್ಘಾಟನೆ: ಡಾ.ಬರಗೂರು ರಾಮಚಂದ್ರಪ್ಪ. ಅತಿಥಿ: ಸುಧನ್ವ ದೇಶಪಾಂಡೆ, ಅಧ್ಯಕ್ಷತೆ: ಪ್ರೊ.ಆರ್. ಕೆ.ಹುಡಗಿ. ಸಂಜೆ 4.30

ರಾಮಲಿಂಗಯ್ಯ ಗೌಡಂಗಾವ್ ಗವಾಯಿಗಳು ಹಾಗೂ ತಂಡದಿಂದ ತತ್ವಪದ. ಲಿಂಗರಾಜು ಮತ್ತು ಗೆಳೆಯರಿಂದ ಸೌಹಾರ್ದ ಗೀತೆಗಳು. ರಾಯಚೂರು ಸಮುದಾಯ ತಂಡದಿಂದ `ಟ್ರೈನ್ ಟು ಪಾಕಿಸ್ತಾನ್~ ನಾಟಕ ಪ್ರದರ್ಶನ. ಸಂಜೆ 7.

`ಟ್ರೈನ್ ಟು ಪಾಕಿಸ್ತಾನ್~ ಕಥೆ ನಡೆಯುವುದು ಪಂಜಾಬ್ ರಾಜ್ಯದ ಮನೋಮಜ್ರಾ ಎಂಬ ಹಳ್ಳಿಯಲ್ಲಿ. ಅಲ್ಲಿನ ಸಿಖ್, ಮುಸ್ಲಿಂ, ಹಿಂದೂಗಳು ಸೌಹಾರ್ದದ ಬಾಳ್ವೆ ನಡೆಸುತ್ತಿದ್ದಾಗ ಎಲ್ಲೋ ನಡೆಯುವ ವಿದ್ಯಮಾನಗಳು ಶಾಂತಿಯನ್ನು ಛಿದ್ರಗೊಳಿಸಿ ರಕ್ತಪಾತಕ್ಕೆ ನಾಂದಿ ಹಾಡುತ್ತವೆ. ನಮ್ಮನ್ನು ನಾವೇ ನಾಶಮಾಡಿಕೊಳ್ಳುವ ಅಪಾಯದಿಂದ ಜಗತ್ತನ್ನು ಪಾರುಮಾಡುವುದು ಎಲ್ಲರ ಕರ್ತವ್ಯವಾಗಬೇಕೆಂಬುದು ನಾಟಕದ ಆಶಯ. 

ಭಾನುವಾರ ರಾಷ್ಟ್ರೀಯ ವಿಚಾರ ಸಂಕಿರಣ `ಜನರಂಗ ಭೂಮಿ ದಾರಿ-ದಿಕ್ಕು~. ವಿಷಯ ಮಂಡನೆ: ಸುಧನ್ವ ದೇಶಪಾಂಡೆ, ಪ್ರಳಯನ್, ಕೋಟಗಾನಹಳ್ಳಿ ರಾಮಯ್ಯ, ಅಧ್ಯಕ್ಷತೆ: ಡಾ.ವಿಜಯಾ.

ಮಧ್ಯಾಹ್ನ 12.30ಕ್ಕೆ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರಿಂದ ಬೋಳುವಾರು ಮೊಹಮ್ಮದ್ ಕುಂಞ ಅವರ ಮಹಾಕಾದಂಬರಿ `ಸ್ವಾತಂತ್ರ್ಯದ ಓಟ~ ಪ್ರಕಟಣಾ ಪೂರ್ವ ಕೂಪನ್ ಬಿಡುಗಡೆ.

ಸಂಜೆ 4.30ಕ್ಕೆ ರಾಮಲಿಂಗಯ್ಯ ಗೌಡಗಾಂವ್ ಗವಾಯಿಗಳು ಮತ್ತು ತಂಡದಿಂದ ತತ್ವಪದ, ಬೆಂಗಳೂರು ಸಮುದಾಯ ತಂಡದಿಂದ `ಧನ್ವಂತರಿಯ ಚಿಕಿತ್ಸೆ~ ಬೀದಿ ನಾಟಕ. ಧಾರವಾಡ ಸಮುದಾಯ ತಂಡದಿಂದ `ಬುದ್ಧ-ಪ್ರಬುದ್ಧ~ ನಾಟಕ.

ನಾಟಕದ ಬಗ್ಗೆ: ಸುತ್ತಲಿನ ವಾತಾವರಣದಲ್ಲಿ ಹಿಂಸೆ, ಕ್ರೌರ್ಯ, ದ್ವೇಷದ ಕರಾಳತೆ ಮುಸುಕಿ ಭಯ, ಆತಂಕ ದುಗುಡ ಹಾಗೂ ನಿರಾಶೆಗಳು ಸೃಷ್ಟಿಯಾದ ಸಮಕಾಲೀನ ಸಂದರ್ಭ. ಪ್ರಸ್ತುತ ನಾಟಕದಲ್ಲಿ ಹಿಂಸೆ ಅಹಿಂಸೆಗಳು ಮುಖಾಮುಖಿಯಾಗಿ ಮಾನವೀಯ ಮೌಲ್ಯಗಳನ್ನು ಚರ್ಚಿಸಿ ಶಸ್ತ್ರಕ್ಕಿಂತ ಪರ್ಯಾಯ ಮಾರ್ಗ ಬಿಂಬಿಸುವ ನಾಟಕವೇ `ಬುದ್ಧ ಪ್ರಬುದ್ಧ~.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.