ರಂಗ ವರ್ತುಲ ರಂಗತಂಡ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತಿರುವ ಸಂದರ್ಭದಲ್ಲಿ ಎರಡು ದಿನಗಳ (ಮಾರ್ಚ್ 18, 19) ರಂಗ ಉತ್ಸವ ಹಮ್ಮಿಕೊಂಡಿದೆ. ಈ ಉತ್ಸವದಲ್ಲಿ 18ರಂದು ‘ಟ್ರೆಡ್ ಮಿಲ್’ ಹಾಗೂ 19ರಂದು ‘ರಬ್ಡಿ’ ನಾಟಕಗಳು ಪ್ರದರ್ಶನಗೊಳ್ಳಲಿವೆ. ಈ ಎರಡೂ ಪ್ರದರ್ಶನಗಳು ತಂಡದ 49ನೇ ಹಾಗೂ 50ನೇ ಪ್ರದರ್ಶನಗಳಾಗಿರುವುದು ಉತ್ಸವದ ರಂಗನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ತಂಡ ಹೇಳಿಕೊಂಡಿದೆ.
ಅನೇಕ ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದು, ಎಲ್ಲಾ ರಂಗಾಸಕ್ತರು ಹಾಗೂ ರಂಗ ವಿಮರ್ಶಕರಿಂದ ಪ್ರಶಂಸೆಗಳನ್ನು ತನ್ನದಾಗಿಸಿಕೊಂಡಿರುವ ಈ ಎರಡೂ ನಾಟಕಗಳು ಪ್ರೇಕ್ಷಕರಿಗೆ ಮತ್ತೆ ಮತ್ತೆ ಇಷ್ಟವಾಗುತ್ತವೆ ಎಂಬ ನಂಬಿಕೆ ತಂಡದ್ದು.
ಅಂದಹಾಗೆ, ‘ಟ್ರೆಡ್ ಮಿಲ್’ ಮತ್ತು ‘ರಬ್ಡಿ’ ನಾಟಕಗಳನ್ನು ನಿತೀಶ್ ಎಸ್. ನಿರ್ದೇಶಿಸಿದ್ದಾರೆ. ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಗೆ : 99868 28680 ಸಂಪರ್ಕಿಸಬಹುದು.
ಸ್ಥಳ: ರಂಗಶಂಕರ, ಜೆ.ಪಿ.ನಗರ 2ನೇ ಹಂತ. ಪ್ರತಿದಿನ ಸಂಜೆ 7.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.