ADVERTISEMENT

ರಮ್ಮಿ ಫೈನಲ್‌ಗೆ ನಾಲ್ವರು

​ಪ್ರಜಾವಾಣಿ ವಾರ್ತೆ
Published 9 ಮೇ 2012, 19:30 IST
Last Updated 9 ಮೇ 2012, 19:30 IST
ರಮ್ಮಿ ಫೈನಲ್‌ಗೆ ನಾಲ್ವರು
ರಮ್ಮಿ ಫೈನಲ್‌ಗೆ ನಾಲ್ವರು   

ರಮ್ಮಿ ಆಟ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ವರ್ಲ್ಡ್ ರಮ್ಮಿ ಟೂರ್ನಿ (ಡಬ್ಲ್ಯೂಆರ್‌ಟಿ) ಸಂಸ್ಥೆಯು ಮೊಟ್ಟ ಮೊದಲ 13 ಕಾರ್ಡ್ ರಮ್ಮಿ ಟೂರ್ನಿಯನ್ನು ಆಯೋಜಿಸಿದೆ. ಇದು ದೇಶದಾದ್ಯಂತ ಮುಂದಿನ ನಾಲ್ಕು ತಿಂಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ 13 ಕಾರ್ಡ್ ಟೂರ್ನಿಯಲ್ಲಿ 600ಕ್ಕೂ ಹೆಚ್ಚು ಉತ್ಸಾಹಿಗಳು ಪಾಲ್ಗೊಂಡಿದ್ದರು.

ಎರಡು ದಿನಗಳ ಈ ಟೂರ್ನಿಯಲ್ಲಿ ನಾಲ್ಕು ಮಂದಿಯನ್ನು ವಿಜೇತರನ್ನಾಗಿ ಆಯ್ಕೆ ಮಾಡಲಾಯಿತು. ವಾಸುದೇವ ದೇಸಾಯಿ, ಶಿವಕುಮಾರ್, ಟಿ.ಬಿ.ಕಿರಣ್ ಕುಮಾರ್, ಜಿ.ಶಂಕರ್ ಆಗಸ್ಟ್ 6ರಂದು ಗೋವಾದಲ್ಲಿ ನಡೆಯಲಿರುವ ಗ್ರಾಂಡ್ ಫೈನಲ್‌ಗೆ ಆಯ್ಕೆಯಾದರು.

ಮೊದಲ ಟೂರ್ನಿ ಕುರಿತು ಪಾನ್ ಇಂಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಮಾರ್ಕೆಟಿಂಗ್ ಮುಖ್ಯಸ್ಥ ಗೌತಮ್ ಥವಾನಿ ಮಾತನಾಡಿ, `ಡಬ್ಲ್ಯೂಆರ್‌ಟಿ ರಮ್ಮಿ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸುವ ವಿನೂತನ ವೇದಿಕೆಯಾಗಿದ್ದು, ಒಂದು ಕೋಟಿಗೂ ಅಧಿಕ ಮೌಲ್ಯದ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಇಂದು ಪಾನ್ ಇಂಡಿಯಾ ನೆಟ್‌ವರ್ಕ್‌ನಲ್ಲಿ ಬೆಂಗಳೂರಿನ ವಿಜೇತರನ್ನು ಅಂತಿಮ ಸುತ್ತಿಗೆ ಪ್ರವೇಶಿಸಲು ಅರ್ಹರೆಂದು ಪ್ರಕಟಿಸಲು ಹೆಮ್ಮೆ ಪಡುತ್ತೇವೆ. ಇಲ್ಲಿ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿ ಟೂರ್ನಿಯ ದ್ವಿತೀಯ ಸುತ್ತನ್ನು ಇದೇ ತಿಂಗಳಲ್ಲಿ ನಡೆಸಲಾಗುವುದು~ ಎಂದರು.

ADVERTISEMENT

ವಿಶ್ವಮಟ್ಟದ 13 ಕಾರ್ಡ್ ರಮ್ಮಿ ಟೂರ್ನಿ ಆಯೋಜಿಸುವುದು, ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಸೃಷ್ಟಿಸುವುದು ಡಬ್ಲ್ಯೂಆರ್‌ಟಿಯ ಮುಖ್ಯ ಉದ್ದೇಶ. ಆಯಾ ನಗರ/ಆನ್‌ಲೈನ್ ಟೂರ್ನಿಯ ವಿಜೇತರು ಆಗಸ್ಟ್‌ನಲ್ಲಿ ನಡೆಯುವ ಗ್ರಾಂಡ್ ಫೈನಲ್‌ನಲ್ಲಿ ಆಡಲು ಅರ್ಹರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.