ADVERTISEMENT

ರೂಬಿಕ್ಸ್ ರಾಜರು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ರೂಬಿಕ್ಸ್ ಕ್ಯೂಬ್ ಬಗ್ಗೆ ಕೇಳಿರಬಹುದಲ್ಲ. ಆಯತಾಕಾರದ 6 ಮುಖಗಳ ಈ ಪುಟ್ಟ ಆಟದ ಸಾಧನ ಮೋಜು, ಕೌಶಲ್ಯ, ಬುದ್ಧಿಮತ್ತೆಯನ್ನೇ ಒರೆಗೆ ಹಚ್ಚುತ್ತದೆ. ಇದರಲ್ಲೇ ವಿಶ್ವ ಮಟ್ಟದ ಸ್ಪರ್ಧೆ ಗೆದ್ದವರಿದ್ದಾರೆ. ಸೋತವರ ಸಂಖ್ಯೆಯಂತೂ ಲೆಕ್ಕವಿಲ್ಲದಷ್ಟು.

ಆಟಿಗೆಗಳ ಬ್ರಾಂಡ್ ಫನ್ಸ್‌ಕೂಲ್ ಈಚೆಗೆ ಲ್ಯಾಂಡ್‌ಮಾರ್ಕ್ ಪುಸ್ತಕ ಮಳಿಗೆ ಮತ್ತು ಕೋರಮಂಗಲದ ಫೋರಂ ಮಾಲ್ ಸಹಯೋಗದಲ್ಲಿ `ಬೆಂಗಳೂರು ರೂಬಿಕ್ಸ್ ಕ್ಯೂಬ್ ಚಾಲೆಂಜ್~ ಏರ್ಪಡಿಸಿತ್ತು. ವಿಶ್ವ ಕ್ಯೂಬ್ ಸಂಘಟನೆಯ ನಿಯಮಾವಳಿಯಂತೆ ನಡೆದ ಈ ಸ್ಪರ್ಧೆಯಲ್ಲಿ 75ಕ್ಕೂ ಹೆಚ್ಚು ರೂಬಿಕ್ಸ್ ಕ್ಯೂಬ್‌ಪಟುಗಳು ಪಾಲ್ಗೊಂಡಿದ್ದರು.
ಹವ್ಯಾಸಿ ವಿಭಾಗದಲ್ಲಿ ಶ್ರೀನಿಧಿ ನಾಗೇಂದ್ರ, ನಕುಲ್ ರಾವಂದೂರು, ಸಂದೀಪ್ ವುಟ್ಲಾ ಮತ್ತು ವೃತ್ತಿಪರರ ವಿಭಾಗದಲ್ಲಿ ಬರ್ನೆಟ್ ಒರ್ಲಾಂಡೊ, ಶ್ರೀರಾಮ ವೆಂಕಟರಾವ್, ಮನಸಿಜ ವೆಂಕಟೇಶ್ ಅವರು ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದುಕೊಂಡರು.

ಕೆಲವೇ ಕ್ಷಣಗಳಲ್ಲಿ ಕ್ಯೂಬ್‌ಗಳನ್ನು ಜೋಡಿಸಬಲ್ಲ ಸಾಮರ್ಥ್ಯದ ವಿಶ್ವದ ಹೆಸರಾಂತ ಕ್ಯೂಬ್ ಪಟು ಜಾನ್ ಲೂಯಿಸ್ ಹಾಜರಿದ್ದು ಸುಲಭವಾಗಿ ಆಡುವ ವಿಧಾನ ಹೇಳಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.