ADVERTISEMENT

ಲಿಂಗ ಸಮಾನತೆಯತ್ತ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ಲಿಂಗ ಸಮಾನತೆಯತ್ತ ಹೆಜ್ಜೆ
ಲಿಂಗ ಸಮಾನತೆಯತ್ತ ಹೆಜ್ಜೆ   

ಮಹಿಳೆಯರಿಗೆ ವಿಶೇಷ ದಿನ ಮಾರ್ಚ್‌ 8. ಮೊದಲ ಬಾರಿಗೆ 1911ರ ಮಾರ್ಚ್‌ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಮಹಿಳಾ ಸಮಾನತೆ, ಮಹಿಳಾ ಸ್ವಾತಂತ್ರ್ಯ, ವಿಧವಾ ಸಬಲೀಕರಣ ಹೀಗೆ ಹೆಣ್ಣುಮಕ್ಕಳ ಪರ ಚಿಂತನೆಯನ್ನು ಉತ್ತೇಜಿಸುವ ವಿಷಯಗಳನ್ನಿಟ್ಟುಕೊಂಡು ಪ್ರತಿ ವರ್ಷ ಮಹಿಳಾ ದಿನವನ್ನಾಚರಿಸಲಾಗುತ್ತಿದೆ.

ಈ ವರ್ಷದ ಪರಿಕಲ್ಪನೆ ‘ಮುನ್ನಡೆಗೆ ಒತ್ತು’ (ಪ್ರೆಸ್‌ ಫಾರ್‌ ಪ್ರೊಗ್ರೆಸ್‌). ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ಅರಿವು ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ‘ಮಿ ಟೂ’, ‘ಟೈಮ್ಸ್‌ ಅಪ್‌’ನಂಥ ಅಭಿಯಾನ ಜನಪ್ರಿಯತೆ ಗಳಿಸಿವೆ. ಇದೇ ನಿಟ್ಟಿನಲ್ಲಿ ‘ಪ್ರೆಸ್‌ ಫಾರ್‌ ಪ್ರೊಗ್ರೆಸ್‌’ ಪರಿಕಲ್ಪನೆಗೆ ದೇಶದಾದ್ಯಂತ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ರಾತ್ರಿ ಕಳೆದು ಬೆಳಗಾಗುವುದರೊಳಗೆ ಸಮಾನತೆ ಲಭಿಸುವುದಲ್ಲವಾದರೂ ಅಭಿಯಾನಗಳು ಜನರ ಮನಸ್ಥಿತಿಯನ್ನು ಬದಲಾಯಿಸುವ ಮಾರ್ಗವಾಗಲಿದೆ. ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳಲ್ಲಿ ಲಿಂಗ ಸಮಾನತೆಯ ಚಿಂತೆನ ಬಿತ್ತುವುದು ‘ಪ್ರೆಸ್‌ ಫಾರ್ ಪ್ರೊಗ್ರೆಸ್‌’ ಉದ್ದೇಶ. ಹೀಗಾಗಿ ಪ್ರಪಂಚದಾದ್ಯಂತ ಈ ವರ್ಷ ಲಿಂಗಸಮಾನತೆಯತ್ತ ಹೆಜ್ಜೆ ಇಡುವ ನಿಟ್ಟಿನಲ್ಲಿ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.