ADVERTISEMENT

ವರ್ಣಯಾತ್ರೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2011, 19:30 IST
Last Updated 20 ಏಪ್ರಿಲ್ 2011, 19:30 IST
ವರ್ಣಯಾತ್ರೆ
ವರ್ಣಯಾತ್ರೆ   

ಭಾವನೆ ಮತ್ತು ಪರಂಪರೆಯ ಮಿಶ್ರಣ. ಹಳ್ಳಿ ಮತ್ತು ನಗರಗಳ ಸೌಂದರ್ಯ. ಬಣ್ಣಗಳ ಸಾಗರದಲ್ಲಿ ತೇಲಾಡುವ ನೋಟ. ಹಿರಿಯ ಕಲಾವಿದ ಡಾ. ಪ್ರಭಾಕರ್ ವಾಘ್ ಅವರ ಕಲಾಕೃತಿಗಳನ್ನು ವೀಕ್ಷಿಸಿದಾಗ ಉದ್ಭವಿಸುವ ಭಾವವಿದು.

ಒಂಟಿ ಮಹಿಳೆ, ಸಾಗರದ ಸೌಂದರ್ಯ, ಹುಣ್ಣಿಮೆಯ ಸೊಬಗು... ಇವೆಲ್ಲ ಅವರ ಕಲಾಕೃತಿಗಳಲ್ಲಿ ಮೂಡಿಬಂದಿದೆ.  ಅವರ ಕಲಾಕೃತಿಗಳ ಪ್ರದರ್ಶನ ಏ. 26ರ ವರೆಗೆ ನಡೆಯಲಿದೆ. ಸ್ಥಳ: ಪ್ರತಿಮಾಸ್ ಆರ್ಟ್ ಗ್ಯಾಲರಿ, ನಂ 104, ಆಂಡ್ರ್ಯೂಸ್ ಕಟ್ಟಡ, ಜೋಯ್ ಆಲುಕ್ಕಾಸ್ ಪಕ್ಕ, ಎಂ ಜಿ ರಸ್ತೆ.

ಮಾಲ್ಯಾದ್ರಿ ಕಲೆ

ನಿವೃತ್ತ ರೈಲ್ವೆ ಅಧಿಕಾರಿ ಕೆ. ಮಾಲ್ಯಾದ್ರಿ ಮತ್ತು ಅವರ ಪುತ್ರ ಸಾಯಿ ಶ್ಯಾಮ್‌ಸುಂದರ್ ಅವರ ಕಲಾಕೃತಿಗಳ ಪ್ರದರ್ಶನ ಗುರುವಾರ ಮುಕ್ತಾಯಗೊಳ್ಳುತ್ತಿದೆ. ಇಲ್ಲಿನ ಚಿತ್ರಗಳ ಮಾರಾಟದಿಂದ ಬಂದ ಹಣವನ್ನು ಯಲಹಂಕದ ‘ಬೆಳಕು’ ವಿಶೇಷ ಮಕ್ಕಳ ಶಾಲೆಗೆ ನೀಡಲಾಗುವುದು.
ಸ್ಥಳ: ಪಟಾಲಮ್ಮ ದೇವಿ ದೇವಸ್ಥಾನ, ಅದ್ದಿಗಾನಹಳ್ಳಿ, ರಾಜಾನುಕುಂಟೆ ಪೋಸ್ಟ್.
ಮಾಹಿತಿಗೆ: 99806 19055.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.