ADVERTISEMENT

ಸಂಜೆಯಲ್ಲಿ ಅರಳಿದ ಹೂವು!

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST
ಜಯಶ್ರೀ
ಜಯಶ್ರೀ   

‘ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರಿಗೆ ಮಾತ್ರ ಅವಕಾಶ ಕೊಡಬೇಕು ಎಂಬುದು ಹೊಸ ಟ್ರೆಂಡ್‌ ರೀತಿಯಲ್ಲಿ ಶುರುವಾಗ್ತಿದೆ. ಸ್ವಲ್ಪ ಹಳಬರಾದರೂ ಅವಕಾಶ ನೀಡಲ್ಲ. ನಟರು ಹಳಬರಾಗಬಹುದು. ಆದರೆ ನಟನೆ ಹಳತಾಗುವುದು ಸಾಧ್ಯವೇ?’

ನಟಿ ಜಯಶ್ರೀ ಅವರು ಕೊಂಚ ನೋವಿನಿಂದಲೇ ಮಾತನಾಡುತ್ತಿದ್ದರು.

ಅವರ ಈ ನೋವಿಗೆ ಮುಲಾಮಾಗಿದ್ದು ಎಂ.ಡಿ.ಕೌಶಿಕ್‌ ನಿರ್ದೇಶನದ ‘ಸಂಜೆಯಲ್ಲಿ ಅರಳಿದ ಹೂವು’ ಸಿನಿಮಾ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಜಯಶ್ರೀ ಅವರಿಗೆ ‘ಇದು ಪುಟ್ಟ ತಂಡದ ದೊಡ್ಡ ಪ್ರಯತ್ನ’ದಂತೆ ಕಂಡಿದೆ.

ADVERTISEMENT

ಈ ವಾರವೇ ಬಿಡುಗಡೆಯಾಗಲಿರುವ ‘ಸಂಜೆಯಲ್ಲಿ ಅರಳಿದ ಹೂವು’ ಎಸ್‌. ಜಿ. ಮಾಲತಿಶೆಟ್ಟಿ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದ ಸಿನಿಮಾ. ಜಯಶ್ರೀ ಅವರ ಜತೆ ನಾರಾಯಣ ಸ್ವಾಮಿ, ಅರ್ಜುನ್‌ ಯೋಗೇಶ್ವರ್‌ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ. ಜನಪ್ರಿಯ ಗಾಯಕ ಆರ್‌. ಕೆ. ಪದ್ಮನಾಭ ಅವರೂ ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

‘ಕಿರುತೆರೆಯಲ್ಲಿ ನಾನು ಮತ್ತು ಜಯಶ್ರೀ ಒಟ್ಟಿಗೆ ನಟಿಸಿದ್ದೇವೆ. ಆದರೆ ಹಿರಿತೆರೆಯಲ್ಲಿ ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದೇವೆ’ ಎಂದರು ನಾರಾಯಣಸ್ವಾಮಿ.

ಅರ್ಜುನ್‌ ಯೋಗೇಶ್ವರ್‌ ಅವರು ಅಭಿನಯಿಸಿದ ‘ಏನೆಂದು ಹೆಸರಿಡಲಿ’ ಸಿನಿಮಾ ಈಗಾಗಲೇ ತೆರೆಕಂಡಿದ್ದರೂ ‘ಸಂಜೆಯಲ್ಲಿ ಅರಳಿದ ಹೂವು’ ಅವರು ನಟಿಸಿದ ಮೊದಲ ಸಿನಿಮಾ. ಹಾಗಾಗಿ ಅವರು ತಮ್ಮ ಮೊದಲ ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿಯಲ್ಲಿಯೇ ಇದ್ದರು.

ದೊಡ್ಡರಂಗೇಗೌಡರು ಬರೆದಿರುವ ಸಾಹಿತ್ಯಕ್ಕೆ ಮಾರುತಿ ಮೀರಜ್‌ಕರ್‌ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.