ADVERTISEMENT

ಸುಜಯಾ ಸ್ಕೂಲ್‌ನಲ್ಲಿ ಡಾ.ಗಾರ್ಡ್ನರ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ಹಾರ್ವರ್ಡ್ ಗ್ರಾಜ್ಯುಯೇಟ್ ಸ್ಕೂಲ್‌ನಲ್ಲಿ ಅರಿವಿನ ಮನಃಶಾಸ್ತ್ರ ಪ್ರಾಧ್ಯಾಪಕರಾಗಿರುವ ಡಾ. ಹೋವರ್ಡ್ ಗಾರ್ಡ್ನರ್ ಭಾರತ ಪ್ರವಾಸದ ವೇಳೆಯಲ್ಲಿ ನಗರದ ಸುಜಯಾ ಸ್ಕೂಲ್‌ಗೆ ಭೇಟಿ ನೀಡಿದ್ದರು.

ಪ್ರೊ. ಗಾರ್ಡ್ನರ್ ಅವರಿಗೆ ಮಹಾನ್ ಶಿಕ್ಷಣ ತಜ್ಞ, ಬಹು ಬುದ್ಧಿವಂತಿಕೆ ಸಿದ್ಧಾಂತದ ಪಿತಾಮಹ ಎಂಬ ಅನ್ವರ್ಥವೂ ಇವೆ. ಇವರು ನಾಯಕತ್ವ, ಸೃಜನಶೀಲತೆ ಮತ್ತು ಕೆಲಸವನ್ನು ಸಮರ್ಥವಾಗಿ ನಿಭಾಯಿಸುವುದು ಹೇಗೆ ಇತ್ಯಾದಿ ವಿಷಯಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು. ಈ ಹಿಂದೆ ವಾಲ್ ಸ್ಟ್ರೀಟ್ ಜರ್ನಲ್ ನಡೆಸಿದ ಸಮೀಕ್ಷೆ `ಟಾಪ್ 5 ಪ್ರಭಾವಿ ವಿಚಾರವಾದಿಗಳು~ ಪಟ್ಟಿಯಲ್ಲಿ ಸ್ಥಾನಗಳಿಸಿದ ಮೇರು ಪ್ರತಿಭೆ ಈತ.
 
`ಗುಡ್ ವರ್ಕ್ ಅಂಡ್ ಫೈವ್ ಮೈಂಡ್ಸ್ ಫಾರ್ ದಿ ಫ್ಯೂಚರ್~ ಸೇರಿದಂತೆ ಇವರು 25ಕ್ಕೂ ಹೆಚ್ಚು ಬೆಸ್ಟ್ ಸೆಲ್ಲರ್ ಪುಸ್ತಕಗಳನ್ನು ಬರೆದಿದ್ದಾರೆ. ಡಾ ಗಾರ್ಡ್ನರ್ ವಿಶ್ವದ ಅತ್ಯಂತ ಪ್ರಸಿದ್ಧ ಶೈಕ್ಷಣಿಕ ತಜ್ಞ ಮತ್ತು 2008ರಲ್ಲಿ ವಿದೇಶಾಂಗ ನೀತಿ ಮತ್ತು ಪ್ರಾಸ್ಪೆಕ್ಟ್ ಮಾಗಝಿನ್‌ನಿಂದ ವಿಶ್ವದ 100 ಪ್ರಮುಖ ಬುದ್ಧಿಜೀವಿಗಳ ಪಟ್ಟಿಯಲ್ಲಿ ಒಬ್ಬರೆಂದು ಹೆಸರುಗಳಿಸಿದ್ದಾರೆ.

`ಶಿಕ್ಷಕರು ಮಕ್ಕಳ ನಡುವೆ ಇರುವ ವೈಯಕ್ತಿಕ ವ್ಯತ್ಯಾಸಗಳನ್ನು ಗಮನಕ್ಕೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಪ್ರತಿ ಮಗುವಿನ ಮನಸ್ಸು ಮತ್ತು ಆಸಕ್ತಿಯಲ್ಲಿ ಭಿನ್ನತೆ ಇರುತ್ತದೆ. ಮಕ್ಕಳಿಗೆ ಅವರ ಮನಸ್ಸನ್ನು ಚೆನ್ನಾಗಿ ಬಳಸಿಕೊಳ್ಳಲು ಶಿಕ್ಷಕರು ಸಹಾಯ ಮಾಡಬೇಕು. ಬಹುಮುಖಿ ಬುದ್ಧಿಮತ್ತೆಯ ವಿಧಾನ ಅಳವಡಿಸುವುದರಿಂದ ಸುಜಯಾ ಸ್ಕೂಲ್ ಮಕ್ಕಳಲ್ಲಿ ಸೃಜನಶೀಲತೆ ಮನೆಮಾಡಿಕೊಂಡಿದೆ~ ಎಂದು ಮಕ್ಕಳನ್ನು ಭೇಟಿ ಮಾಡಿ ತಮ್ಮ ಖುಷಿ ಹಂಚಿಕೊಂಡರು ಡಾ. ಹೋವರ್ಡ್ ಗಾರ್ಡ್ನರ್.

ವಾಲ್ಯೂ ಅಂಡ್ ಬಜೆಟ್ ಹೌಸಿಂಗ್ ಕಾರ್ಪೊರೇಷನ್ ಎಜ್ಯುಕೇಶನ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್‌ನ (ವಿಬಿಎಚ್‌ಸಿ) ಸಿಇಒ ಪ್ರಿಯಾ ಕೃಷ್ಣನ್ ಮಾತನಾಡಿ, ಡಾ. ಹೋವರ್ಡ್ ಗಾರ್ಡ್ನರ್ ನಮ್ಮ ಶಾಲೆಗೆ ಭೇಟಿ ನೀಡಿರುವುದು ಹೆಮ್ಮೆಯ ವಿಷಯ.

ನಾವು ಪ್ರತಿ ಮಗುವಿಗೂ ಕೂಡ ಉತ್ತಮ ಶಿಕ್ಷಣ ನೀಡಲು ಬಯಸುತ್ತೇವೆ. ಸುಜಯಾ ಸ್ಕೂಲ್‌ನ ಪ್ರಾಥಮಿಕ ಗುರಿ ಎಲ್ಲ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಸ್ವತಂತ್ರ ಆಲೋಚನಾ ಶಕ್ತಿ ಬೆಳೆಸುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.