ADVERTISEMENT

ಸುಲಭ ಕಲಿಕೆಗೆ ಎಂಪವರ್ ಲರ್ನಿಂಗ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ಶೈಕ್ಷಣಿಕ ಕ್ಷೇತ್ರ ವಿಸ್ತಾರಗೊಳ್ಳುತ್ತಿದ್ದಂತೆ ಶಿಕ್ಷಣ ಪರಿಕರಗಳೂ ದಿನೇದಿನೇ ಹೊಸ ರೂಪು ಪಡೆಯುತ್ತಿವೆ. ಇದೀಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದೇ `ಎಂಪವರ್ ಲರ್ನಿಂಗ್' ಎಂಬ ಡಿಜಿಟಲ್ ಶಿಕ್ಷಣ ಸೇವೆಯೊಂದು ಆರಂಭಗೊಂಡಿದೆ.

14ರಿಂದ 25ರ ವಯೋಮಾನದವರಿಗೆ ವಿಷಯವನ್ನು ಸರಳವಾಗಿ ಅರ್ಥಪಡಿಸಲೆಂದೇ ಮಧುಮತಿ ಮತ್ತು ನಾರಾಯಣ ಎಂಬುವರು ಈ ಎಂಪವರ್ ಲರ್ನಿಂಗ್ ಆರಂಭಿಸಿದ್ದಾರೆ. ಹೆಚ್ಚು ಅಂಕ ಗಳಿಸುವುದರೊಂದಿಗೆ ಉದ್ಯೋಗದ ಸಲಹೆಗಳನ್ನೂ ನೀಡುವುದು ಈ ಸಂಸ್ಥೆಯ ಉದ್ದೇಶವಂತೆ.

ಸಾಮಾನ್ಯ ಶಿಕ್ಷಣದಂತಲ್ಲದೆ, `ವಿಡಿಯೊ 2 ಲರ್ನ್' ಇಲ್ಲಿನ ವಿಶೇಷತೆ. ಇದೊಂದು ಪ್ರಮುಖ ಕಲಿಕಾ ವಿಧಾನವಾಗಿದ್ದು, ಮೌಖಿಕವಲ್ಲದೆ, ವಿಡಿಯೊ ಮೂಲಕ ಮಾಹಿತಿ ನೀಡಲಾಗುತ್ತದೆ. ಗಣಿತ, ಖಗೋಳ ಶಾಸ್ತ್ರ, ರಸಾಯನ ಶಾಸ್ತ್ರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಒಳಗೊಂಡಿರುತ್ತದೆ.

ಕಲಿಕೆಯನ್ನು ಸುಲಭ ಮತ್ತು ಉತ್ತಮಗೊಳಿಸುವ ನಿಟ್ಟಿನಲ್ಲಿ ಹಲವಾರು ಗ್ಯಾಡ್ಜೆಟ್‌ಗಳು ಕಾಲಿಡುತ್ತಿದ್ದು, ಎಂಪವರ್ ಲರ್ನಿಂಗ್ ಕೂಡ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಾರತೀಯ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಪ್ರಕಾರ ಸುಮಾರು 15 ಕೋಟಿ ಜನ ಅಂತರಜಾಲ ಬಳಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ವರದಿ ಇದ್ದು, ಕಲಿಕೆ ಇನ್ನಷ್ಟು ಕುತೂಹಲಕಾರಿಯಾಗುವ ನಿರೀಕ್ಷೆಯಿದೆ.

ಪಠ್ಯ ಪುಸ್ತಕಗಳ ಹೊರತಾಗಿಯೂ ಸಮರ್ಥ ಕಲಿಯುವಿಕೆಯ ಸಾಧನವಾಗಿ ಜೆಇಇ ಮೈನ್ಸ್‌ನ (ಗಣಿತ/ಭೌತಶಾಸ್ತ್ರ/ರಸಾಯನಶಾಸ್ತ್ರ) 750 ವಿಡಿಯೊಗಳು, ಕ್ಯಾಂಪಸ್ 2 ಕಾರ್ಪೊರೇಟ್ (ಶಾಲೆಯ ಉತ್ಪನ್ನಗಳನ್ನು ಕೊನೆಗಾಣಿಸುವುದು) ಕುರಿತ 60ಕ್ಕೂ ಹೆಚ್ಚು ವಿಡಿಯೊಗಳು, ಪದ ಸಂಪತ್ತು ಶಬ್ದಕೋಶ ಹೆಚ್ಚಿಸಲು 500 ಪದಗಳ 150 ವಿಡಿಯೊಗಳನ್ನು ಹೊರತಂದಿದೆ.

ಕ್ಯಾಂಪಸ್ 2 ಕಾರ್ಪೊರೇಟ್ ಪ್ರೋಗ್ರಾಮ್, ವ್ಯವಹಾರ ಚಾತುರ್ಯ, ಸಂವಹನ, ಸಂದರ್ಶನ, ಸಮರ್ಥ ನಿರ್ಧಾರ ಮತ್ತಿತರೆ ಅಂಶಗಳನ್ನು ಇದರಿಂದ ಕಲಿಯಬಹುದಾಗಿದೆ. ಇದರೊಂದಿಗೆ `ಎಂಪವರ್ ವರ್ಡ್ ಪವರ್' ಎಂಬ ಉಚಿತ ಅಪ್ಲಿಕೇಷನ್ ಅನ್ನೂ ಹೊರತರಲಾಗಿದೆ.

ಎಮ್ ಲರ್ನಿಂಗ್ 2016ರ ಸಮಯಕ್ಕೆ ಭಾರತದ 87ಮಿಲಿಯನ್ ಜನರನ್ನು ತಲುಪುವ ಗುರಿ ಹೊಂದಿದ್ದು,  ಗ್ರಾಮೀಣ ವಿದ್ಯಾರ್ಥಿಗಳೂ ಇದರ ಲಾಭ ಪಡೆಯಬಹುದು. ಅಪ್ಲಿಕೇಷನ್ ಅನ್ನು ರೂ.25 ಕೊಟ್ಟು ಒಮ್ಮೆ ಡೌನ್‌ಲೋಡ್ ಮಾಡಿಕೊಂಡರೆ ಸಾಕು.

ಪ್ರಸ್ತುತ ಎಂಪವರ್ ಲರ್ನಿಂಗ್ ಕಲಿಕೆಗಾಗಿ ಸಣ್ಣ ವಿಡಿಯೊ ಮಾದರಿಗಳನ್ನು ಐಐಟಿ ಜೆಇಇ ವಿದ್ಯಾರ್ಥಿಗಳಿಗೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಸಿಬಿಎಸ್‌ಸಿಯ 12ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಮೆಡಿಕಲ್ ಪೂರ್ವಭಾವಿ ಪರೀಕ್ಷೆ ಅಭ್ಯರ್ಥಿಗಳಿಗೆ ಮತ್ತು ಬ್ಯಾಂಕಿಂಗ್ ವಿದ್ಯಾರ್ಥಿಗಳಿಗೂ ವಿಸ್ತರಿಸಲಿದೆ.  ಮೇಲ್ಪಟ್ಟ ಮೂರೂ ಅಪ್ಲಿಕೇಷನ್‌ಗಳು ವರ್ಷಕ್ಕೆ ಕೇವಲ 899ರೂ.ಗಳಲ್ಲಿ ಲಭ್ಯ.  ತಿಂಗಳಿಗೆ ಕೇವಲ 99ರೂ. ಶುಲ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.