ADVERTISEMENT

ಹಬ್ಬಕ್ಕೆ ವರ್ಣರಂಜಿತ ತೆರೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಪಡುವಣದಲಿ ಸೂರ್ಯ ಜಾರಿದ ಸಮಯ... ತಂಪಾದ ಗಾಳಿ ಬೀಸಿ ಚಂದಿರನ ಆಗಮನಕ್ಕೆ ಶುಭಕೋರುವ ರಸಗಳಿಗೆ. ಈ ಪ್ರಕೃತಿಯ ವಿಸ್ಮಯವೇ ಹೀಗೆ. ಈಗ ಇದ್ದದ್ದು ಮರುಕ್ಷಣ ಇರದು. ಆದರೆ ನಿಸರ್ಗದ ಸವಿಯನ್ನು ಸವಿಯುವ ಮನಸ್ಸು ಬೇಕು. ಮಾಲ್ ಅಂದರೆ ಅದು ಪ್ರಕೃತಿಯಿಂದ ದೂರ ಎಂಬ ಕಲ್ಪನೆಗೆ ವಿರುದ್ಧವಾಗಿದೆ ಗರುಡಾಮಾಲ್.

`ಪ್ರಕೃತಿಯನ್ನು ಪ್ರೀತಿಸಿ~ `ನಮ್ಮ ನಗರವನ್ನು ಪ್ರೀತಿಸಿ~ `ನಮ್ಮ ಹಬ್ಬವನ್ನು ಪ್ರೀತಿಸಿ~ ಎಂಬ ಪರಿಕಲ್ಪನೆಯೊಂದಿಗೆ ಆರಂಭವಾದ ಗ್ರೇಟ್ ಗರುಡಾ ಶಾಪಿಂಗ್ ಫೆಸ್ಟ್‌ಗೆ ಜನವರಿ 1ರಂದು ವರ್ಣರಂಜಿತ ತೆರೆಬಿದ್ದಿದೆ. ಸಂಗೀತ, ನೃತ್ಯದಿಂದ ಕೂಡಿದ ಆ ಸಂಜೆ ಗರುಡಾ ಮಾಲ್ ಕಳೆಕಟ್ಟಿತು.

ಸ್ಯಾಂಡಲ್‌ವುಡ್ ತಾರೆ ಹರ್ಷಿಕಾ ಪೂಣಚ್ಚ ಅವರ ಮೋಹಕ ನೃತ್ಯ, ರಾಜೇಶ್ ಕೃಷ್ಣನ್ ಅವರ ಮಧುರ ಸಂಗೀತ ಮಾಲ್‌ನಲ್ಲಿ ಸೇರಿದ್ದ ಜನಸಮೂಹವನ್ನು ಆಕರ್ಷಿಸಿತು. ಇದಿಷ್ಟೇ ಅಲ್ಲದೆ `ವಾಯ್ಸ ಆಫ್ ಬೆಂಗಳೂರು~ ಪ್ರಶಸ್ತಿ ವಿಜೇತ ಗಾಯಕರಾದ ಸುಪ್ರಿಯಾ ಆರ್., ಆಕಾಂಕ್ಷಾ ಬಾದಾಮಿ, ರಘುಪತಿ ಝಾ ಮತ್ತಿತರರು ಜನಪ್ರಿಯ ಗೀತೆಗಳನ್ನು ಹಾಡಿದರು.

25 ವರ್ಷಗಳ ಹಿಂದೆ  ಬೆಂಗಳೂರು ಹೇಗಿತ್ತು, ಮುಂದಿನ 25 ವರ್ಷಗಳಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸುವ ಕಳಕಳಿಯನ್ನೂ ಗರುಡಾ ಮಾಲ್ ಇಟ್ಟುಕೊಂಡಿದೆ. ಶಾಪಿಂಗ್ ಮಾಡಿದ ಒಬ್ಬ ಅದೃಷ್ಟಶಾಲಿ ಗ್ರಾಹಕನಿಗೆ ಒಂದು ಬಂಗಾರದ ನಾಣ್ಯ ಕೂಡ ಸಂದಿತು. ಇದು ಗ್ರೇಟ್ ಗರುಡಾ ಶಾಪಿಂಗ್ ಫೆಸ್ಟ್‌ನ ಕೊಡುಗೆ.   ್ಢ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.