ADVERTISEMENT

ಹೋಳಿ ರಂಗು; ಬಣ್ಣದ ಗುಂಗು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST
ಹೋಳಿ ರಂಗು; ಬಣ್ಣದ ಗುಂಗು
ಹೋಳಿ ರಂಗು; ಬಣ್ಣದ ಗುಂಗು   

ಪೆನ್ನಿಗೆ ಬಣ್ಣದ ಮಸಿ
ಬಣ್ಣಗಳ ಹಬ್ಬ ಹೋಳಿಗೆಂದೇ ಪೆನ್ನುಗಳ ಮಳಿಗೆ ವಿಲಿಯಮ್ ಪೆನ್ 46 ವಿಶಿಷ್ಟ ಬಣ್ಣಗಳ ಇಂಕ್‌ಗಳನ್ನು ಪ್ರಸ್ತುತಪಡಿಸುತ್ತಿದೆ. ಪ್ರೈವೇಟ್ ರಿಸರ್ವ್, ಸಿಡಿಎ, ಸೇಲರ್ ಮತ್ತು ಲ್ಯಾಮಿಗಳಲ್ಲಿ ಈ ವರ್ಣವೈವಿಧ್ಯ ದೊರೆಯಲಿದೆ.ಋತುಮಾನದ ಮಜ ಇಲ್ಲಿಗೇ ಮುಗಿಯುವುದಿಲ್ಲ. ಮಳಿಗೆಯು ಗ್ರಾಹಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿಟ್ಟ ಸ್ಯಾಂಪಲ್ ಕಿಟ್‌ನಿಂದ ಮಸಿ ಪ್ರಾತ್ಯಕ್ಷಿಕೆಗೆ ಅನುವು ಮಾಡಿಕೊಡುತ್ತಿದೆ. ಅಲ್ಲದೆ ಹೋಳಿ ಸಂದರ್ಭದಲ್ಲಿ ಫೌಂಟನ್ ಪೆನ್ನು ಖರೀದಿಸಿದರೆ ಪ್ರೈವೇಟ್ ರಿಸರ್ವ್ ಇಂಕ್ ಕಾರ್ಟ್ರಿಡ್ಜ್ ಉಚಿತವಾಗಿ ನೀಡಲಿದೆ.

ಹೈಪರ್‌ಸಿಟಿ ಕಲರ್
ಕಾಂತಿಯುತ ಬಣ್ಣಗಳು, ಚಿಲ್ಲನೆ ಚಿಮ್ಮುವ ನೀರು, ನೀರು ತುಂಬಿದ ಬಲೂನುಗಳು, ಸಿಹಿ.. ಎಲ್ಲವೂ ಹೋಳಿ ಸಂಭ್ರಮದ ಕಳೆ. ಹಬ್ಬಕ್ಕೆ ಜೀವ ಮತ್ತು ಚೈತನ್ಯ ನೀಡುವುದೇ ಈ ಬಣ್ಣಗಳು.ಕೆಂಪು, ಹಸಿರು, ನೀಲಿ, ಕಿತ್ತಲೆ ಮತ್ತು ಇತರ ಬಣ್ಣಗಳ ವಿಶಾಲ ಶ್ರೇಣಿಯ ಪರಿಸರ ಸ್ನೇಹಿ ಬಣ್ಣಗಳು ವೈಟ್‌ಫೀಲ್ಡ್ ರಸ್ತೆಯ ‘ಹೈಪರ್‌ಸಿಟಿ’ಯಲ್ಲಿ ಕಾದಿವೆ. ಜಂಬೋ ಮತ್ತು ಜೂನಿಯರ್ ಪ್ಯಾಕುಗಳಲ್ಲಿ ಲಭ್ಯ. ವಾಟರ್ ಗನ್‌ಗಳೂ ಸಿಗುತ್ತವೆ.  

ಮಾಮಾಮಿಯಾ ಥಂಡೈ
ಹೋಳಿ ಹಬ್ಬಕ್ಕೂ ಥಂಡೈಗೂ ಬಿಡಲಾರದ ನಂಟಿದೆ. ಈ ಹೋಳಿ ವಾರಾಂತ್ಯಕ್ಕೆಂದೇ ಮಾಮಾ ಮಿಯಾ ಮಳಿಗೆ, ವಿಶೇಷ ಥಂಡೈ ಐಸ್‌ಕ್ರೀಮ್ ನೀಡುತ್ತಿದೆ. ಥಂಡೈ ಸಿರಪ್, ಬಾದಾಮಿಗಳು, ಕೇಸರಿ, ಪಿಸ್ತಾಗಳಿರುವ ‘ಥಂಡೈ ಗೆಲಾಟೊ’ ಏ.9ರ ವರೆಗೂ ಸ್ಕೂಪ್‌ಗೆ ರೂ 55 ದರದಲ್ಲಿ ಇಂದಿರಾನಗರ ಮಳಿಗೆಯಲ್ಲಿ ಲಭ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.