ಒಂದಷ್ಟು ವರ್ಷ ಬ್ರೇಕ್ ಪಡೆದು ಸಿನಿಕ್ಷೇತ್ರ ಪ್ರವೇಶಿಸಿದರೂ, ಅವಕಾಶಗಳ ಕೊರತೆ ಕಾಣದವರು ನಟಿ ಐಶ್ವರ್ಯಾ ರೈ. ಈ ನೀಲಿ ಕಂಗಳ ಚೆಲುವೆ ತಮ್ಮ ಮುಂದಿನ ಸಿನಿಮಾಕ್ಕಾಗಿ ಬರೋಬ್ಬರಿ ₹10 ಕೋಟಿ ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ.
1967ರಲ್ಲಿ ತೆರೆಕಂಡಿದ್ದ ‘ರಾತ್ ಔರ್ ದಿನ್’ ಸಿನಿಮಾವನ್ನು ಮತ್ತೆ ಹೊಸ ರೂಪದೊಂದಿಗೆ ತೆರೆಗೆ ತರಲು ನಿರ್ಮಾಪಕಿ ಪ್ರೇರಣಾ ಅರೋರ ಸಿದ್ಧತೆ ನಡೆಸಿದ್ದಾರೆ. ಹಿಂದೆ ನರ್ಗೀಸ್ ನಟಿಸಿದ್ದ ಪಾತ್ರಕ್ಕೆ ಈಗ ಐಶ್ವರ್ಯಾ ಬಣ್ಣ ಹಚ್ಚಲಿದ್ದಾರೆ. ಈ ಮೂಲಕ ತಮ್ಮನ್ನು ದ್ವಿಪಾತ್ರದಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ ಎಂಬ ಮಾಹಿತಿಯನ್ನೂ ಅವರೇ ಬಹಿರಂಗಪಡಿಸಿದ್ದಾರೆ.
ಈ ಸಿನಿಮಾ ಮತ್ತಷ್ಟು ಸುದ್ದಿ ಆಗಲು ಕಾರಣವಾಗಿರುವುದು ಐಶ್ವರ್ಯಾ ಅವರ ಬೇಡಿಕೆ ಇಟ್ಟಿರುವ ಸಂಭಾವನೆಯಿಂದ. ಆದರೆ ಅವರ ಬೇಡಿಕೆಗೆ ಚಿತ್ರತಂಡ ಒಂದು ಕ್ಷಣವೂ ಯೋಚಿಸದೆ ಒಪ್ಪಿಗೆ ನೀಡಿದೆ. ಸದ್ಯ ಐಶ್ವರ್ಯಾ ಅತುಲ್ ಮುಖರ್ಜಿ ನಿರ್ದೇಶನದ ‘ಫನ್ನೇ ಖಾನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ರಾಜ್ಕುಮಾರ್ ರಾವ್ ಅವರೊಂದಿಗೆ ಐಶ್ವರ್ಯಾ ನಟಿಸಿದ್ದು, ಚಿತ್ರ ಜೂನ್ನಲ್ಲಿ ಬಿಡುಗಡೆಯಾಗಲಿದೆ. ಸಲ್ಮಾನ್ ಖಾನ್ ಅಭಿನಯದ ‘ರೇಸ್ 3’ ಕೂಡ ಅದೇ ಸಮಯದಲ್ಲಿ ತೆರೆಕಾಣಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.