ADVERTISEMENT

ರಂಗ ಪಂಚಮಿ: ಪ್ರಶಸ್ತಿ ಪ್ರದಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಜುಲೈ 2018, 14:12 IST
Last Updated 1 ಜುಲೈ 2018, 14:12 IST
   

ದನಿ ಕಳೆದುಕೊಂಡವರ ದನಿಯಾಗಿ 1983ರಿಂದಲೂ ಕೆಲಸ ಮಾಡುತ್ತಿದೆ ರಂಗ ಪಂಚಮಿ (ರಂಗಚೇತನ). ಹೊಸ ನಾಟಕಗಳ ಪ್ರಯೋಗ, ರಂಗ ತರಬೇತಿ ಶಿಬಿರ, ಆಡಳಿತದಲ್ಲಿ ಕನ್ನಡ ತರಬೇತಿ ಶಿಬಿರ, ರೈತರು, ಕೂಲಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಜನಪರ ಕಾರ್ಯಕ್ರಮಗಳನ್ನೂ ರಂಗ ಪಂಚಮಿ ಮಾಡುತ್ತಿದೆ.

ಸಾಣೇಹಳ್ಳಿಯ ಶಿವಕುಮಾರ ಕಲಾಸಂಘದ ಸಹಯೋಗದೊಂದಿಗೆ ಹಿರಿಯರಂಗಕರ್ಮಿ ಸಿಜಿಕೆ ನೆನಪಿನಲ್ಲಿ ನಗದು ಪ್ರಶಸ್ತಿಯನ್ನೂ ಇದು ನೀಡುತ್ತಿದೆ. ಮೂರು ವರ್ಷಗಳಿಂದ ಗ್ರಾಮೀಣ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ರಂಗಪಂಚಮಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಗ್ರಾಮದಲ್ಲಿ ಜನಪರ ಸಂಸ್ಕೃತಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿದೆ.

ಈ ಉತ್ಸವದ ಸಮಾರೋಪ ಇಂದು (ಸೋಮವಾರ) ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ. ಈ ಬಾರಿಯ ಉತ್ಸವದಲ್ಲಿ ವಿವಿಧ ಕ್ಷೇತ್ರದ ಏಳು ಮಂದಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ವಿಶೇಷ.

ADVERTISEMENT

ಹಿರಿಯ ರಂಗಕರ್ಮಿ ಪ್ರಮೋದ್ ಶಿಗ್ಗಾಂವ್ ಅವರಿಗೆ ಸಿಜಿಕೆ ಪ್ರಶಸ್ತಿ, ನಟ ಎಸ್.ದೊಡ್ಡಣ್ಣ ಅವರಿಗೆ ಚಿತ್ರರತ್ನ ಪ್ರಶಸ್ತಿ, ಹಿರಿಯ ಪತ್ರಕರ್ತ ರಾಮದೇವ ರಾಕೆ ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ, ನಟ ಮಂಡ್ಯ ರಮೇಶ್ ಅವರಿಗೆ ರಂಗ ಚೇತನ ಪ್ರಶಸ್ತಿ, ಡಾ.ಸೀತಾರಾಮ್ ಭಟ್ ಅವರಿಗೆ ವೈದ್ಯರತ್ನ ಪ್ರಶಸ್ತಿ

ನೀಡಿ ಗೌರವಿಸಲಾಗುತ್ತಿದೆ. ರಂಗಪಂಚಮಿ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ನಾಡಚೇತನ ಗೌರವ ಪ್ರಶಸ್ತಿಗೆ ಈ ಬಾರಿ ಡಾ.ಸತೀಶ್ ಕುಮಾರ್ ಎಸ್. ಹೊಸಮನಿ ಮತ್ತು ವಿ. ಕೃಷ್ಣಪ್ರಸಾದ್ ಭಾಜನರಾಗಿದ್ದಾರೆ.

ಜನಪರ ಸಂಸ್ಕೃತಿ ಉತ್ಸವ 2018 ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅತಿಥಿಗಳು-ಡಾ.ಡಿ.ಕೆ. ಚೌಟ, ಡಾ.ಸಿ.ಎನ್.ಮಂಜುನಾಥ, ಎಸ್.ಜಿ.ಸಿದ್ದರಾಮಯ್ಯ, ಜೆ.ಲೋಕೇಶ್, ಡಾ.ಎಂ.ಆರ್. ಏಕಾಂತಪ್ಪ, ಎಂ.ವಿ.ರೇವಣಸಿದ್ದಯ್ಯ, ಸಮಾರೋಪ ನುಡಿ- ಆರ್. ನರೇಂದ್ರ ಬಾಬು. ಆಯೋಜನೆ-ರಂಗಪಂಚಮಿ, ಸ್ಥಳ- ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸೋಮವಾರ ಸಂಜೆ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.