ADVERTISEMENT

ಚಿಂತನೆಗೆ ವೇದಿಕೆಯಾದ ‘ಬ್ರಿಗೇಡ್ ಷೋಕೇಸ್’

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST
ಎಂ.ಆರ್.ಜೈಶಂಕರ್, ಅಧ್ಯಕ್ಷ, ಬ್ರಿಗೇಡ್ ಸಮೂಹ.
ಎಂ.ಆರ್.ಜೈಶಂಕರ್, ಅಧ್ಯಕ್ಷ, ಬ್ರಿಗೇಡ್ ಸಮೂಹ.   

ವಸತಿ ಸಮುಚ್ಚಯ, ಐಷಾರಾಮಿ ಅಪಾರ್ಟ್‌ಮೆಂಟ್‌ಗಳು, ವಿಶಿಷ್ಟ ವಿನ್ಯಾಸದ ವಿಲ್ಲಾಗಳು ಹಾಗೂ ವ್ಯವಹಾರ ಕೇಂದ್ರದ ಕಟ್ಟಡಗಳನ್ನು ಕಟ್ಟುವುದರಲ್ಲಿ ಬ್ರಿಗೇಡ್‌ ಗ್ರೂಪ್‌ ಮುಂಚೂಣಿಯಲ್ಲಿದೆ.

ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಬ್ರಿಗೇಡ್ ಷೋಕೆಸ್’ ಪ್ರದರ್ಶನ ಮೇಳದಲ್ಲಿ ಬ್ರಿಗೇಡ್‌ ಗ್ರೂಪ್ ನಿರ್ಮಿಸುತ್ತಿರುವ ಹಾಗೂ ಪೂರ್ಣಗೊಂಡಿರುವ ಹಲವು ವಸತಿ ಸಮುಚ್ಚಯ, ವಾಣಿಜ್ಯ ಸಂಕೀರ್ಣದ ಕಟ್ಟಡಗಳ ಮಾಹಿತಿಯನ್ನು ಜನರಿಗೆ ನೀಡಲಾಯಿತು.

ಬೆಂಗಳೂರಿನ ವಿವಿಧೆಡೆ ತಾನು ನಿರ್ವಹಿಸುತ್ತಿರುವ ಪ್ರಾಜೆಕ್ಟ್‌ಗಳನ್ನೂ ಬ್ರಿಗೇಡ್‌ ಸಮೂಹ ಇದೇ ಸಂದರ್ಭ ಅನಾವರಣಗೊಳಿಸಿತು.

ADVERTISEMENT

ಗಮನ ಸೆಳೆದ ಬ್ರಿಗೇಡ್ ಸಮೂಹದ ಯೋಜನೆಗಳಿವು...
ಬೆಂಗಳೂರು ಪೂರ್ವ: ಬ್ಯೂನಾ ವಿಸ್ತಾ, ಎಕ್ಸಾಟಿಕಾ, ಕಾಸ್ಮೊಪಾಲಿಸ್, ಲೆಕ್‌ಫ್ರಂಟ್, ಗೋಲ್ಡನ್ ಟ್ರಯಾಂಗಲ್‌.
ಬೆಂಗಳೂರು ಉತ್ತರ: ಆರ್ಚರ್ಡ್ಸ, ಅಟ್ಮೊಸ್ಪಿಯರ್, ಕಲಾಡಿಯಮ್, ನಾರ್ತರಿಡ್ಜ್, ಅಲ್ಟಾಮಾಂಟ್‌.
ಬೆಂಗಳೂರು ನೈಋತ್ಯ: ಬ್ರಿಗೇಡ್ ಮಿಡೌಸ್, ಸೆವನ್ ಗಾರ್ಡನ್ಸ್, ಓಮೆಗಾ.

ಭರ್ಜರಿ ಬೆಳವಣಿಗೆ
ಬ್ರಿಗೇಡ್‌ ಷೋಕೇಸ್‌ನಲ್ಲಿ ಪಾಲ್ಗೊಂಡಿದ್ದ ಅನೇಕರು ನಗರದ ರಿಯಲ್‌ ಎಸ್ಟೇಟ್‌ ಉದ್ಯಮದ ಬೆಳವಣಿಗೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.
ಬೆಂಗಳೂರು ಪೂರ್ವಕ್ಕೆ ಸೇರುವ ವೈಟ್‌ಫಿಲ್ಡ್, ಹಳೆ ಮದ್ರಾಸ್ ರಸ್ತೆ, ಬೂದಿಗೆರೆ ಕ್ರಾಸ್, ಬೆಳ್ಳಂದೂರು ಮತ್ತು ಸರ್ಜಾಪುರ ರಸ್ತೆಯ ಪ್ರದೇಶ ಈಗಾಗಲೇ ಸಾಕಷ್ಟು ಅಭಿವೃದ್ಧಿಯಾಗಿದೆ. ಈ ಭಾಗದಲ್ಲಿ ಹಲವು ಬಹುರಾಷ್ಟ್ರೀಯ ಕಂಪೆನಿಗಳು, ಐ.ಟಿ. ಕಂಪೆನಿಗಳು ಇವೆ. ಹೊರವರ್ತುಲ ರಸ್ತೆಯ ಸಂಪರ್ಕ ಇರುವ ಈ ಪ್ರದೇಶಗಳಲ್ಲಿನ ಆಸ್ತಿಯ ಮೌಲ್ಯವು ಪ್ರತಿ ವರ್ಷವು ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಇಲ್ಲಿ ಬಂಡವಾಳ ಹೂಡಿದರೆ ಕೈಸುಟ್ಟುಕೊಳ್ಳುವ ಪ್ರಮೇಯ ಒದಗಿಬರದು ಎಂಬ ಅನಿಸಿಕೆ ಹಲವರು ಮಾತುಗಳಲ್ಲಿ ತೇಲಿ ಬರುತ್ತಿತ್ತು.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿರುವ ಬೆಂಗಳೂರು ಉತ್ತರದಲ್ಲಿ ಸ್ವಂತ ಮನೆ ಖರೀದಿ ಇಂದಿಗೂ ಪ್ರತಿಷ್ಠೆಯ ವಿಷಯ ಎನಿಸಿದೆ. ಬಾಣಸವಾಡಿ, ಎಚ್.ಬಿ.ಆರ್. ಬಡಾವಣೆ, ಹೆಬ್ಬಾಳ, ಹೆಣ್ಣೂರು, ಥಣಿಸಂದ್ರ ಮುಖ್ಯರಸ್ತೆ, ಬಳ್ಳಾರಿ ರಸ್ತೆ, ದೇವನಹಳ್ಳಿಯ ಸುತ್ತಮುತ್ತ ರಿಯಲ್ ಎಸ್ಟೇಟ್ ತ್ವರಿತವಾಗಿ ಬೆಳೆಯುತ್ತಿದೆ. ಭೂಮಿಗೆ ಚಿನ್ನದ ಬೆಲೆ ಬಂದಿದೆ ಎಂದು ಅನೇಕರು ಅಭಿಪ್ರಾಯಪಟ್ಟರು.

ಭವಿಷ್ಯದಲ್ಲಿ ಮೆಟ್ರೊ ರೈಲಿನ ಸಂಪರ್ಕ ದೊರೆಯುವ ಪ್ರದೇಶದಲ್ಲಿ ಇದೀಗ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಭವಿಷ್ಯದಲ್ಲಿ ರಿಯಲ್‌ ಎಸ್ಟೇಟ್ ಕಂಪೆನಿಗಳು ಇತ್ತ ಹೆಚ್ಚು ಗಮನ ಹರಿಸಲಿವೆ ಎಂಬ ನಿರೀಕ್ಷೆಯನ್ನು ಹಲವರು ಹಂಚಿಕೊಂಡರು.

*
ಬೆಂಗಳೂರು ನಗರಕ್ಕೆ ಪ್ರತಿ ದಿನ 1500 ಕುಟುಂಬಗಳು ವಲಸೆ ಬರುತ್ತವೆ. ಅವರಿಗೆ ವಸತಿ ಸೌಲಭ್ಯ ಕಲ್ಪಿಸುವುದೇ ಒಂದು ಸವಾಲಿನ ಕೆಲಸ. ಅದನ್ನು ಸುಲಭವಾಗಿಸಲು ಬ್ರಿಗೇಡ್ ಸಮೂಹ ಶ್ರಮಿಸುತ್ತಿದೆ. ನಗರದ 30 ಸ್ಥಳಗಳಲ್ಲಿ 50 ವಿವಿಧ ಪ್ರಾಜೆಕ್ಟ್‌ಗಳನ್ನು ನಾವು ನಿರ್ವಹಿಸುತ್ತಿದ್ದೇವೆ.

-ಎಂ.ಆರ್.ಜೈಶಂಕರ್, ಅಧ್ಯಕ್ಷ, ಬ್ರಿಗೇಡ್ ಸಮೂಹ.

– ಪಾಷಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.