ಇರಾನ್ ಮೇಲೆ ಅಮೆರಿಕ ವಾಯುದಾಳಿ ನಡೆಸಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅದಕ್ಕೆ ಸಂಬಂಧಿಸಿದ ಕೆಲವು ಪೋಸ್ಟ್‌ಗಳು ಹರಿದಾಡುತ್ತಿವೆ. ‘ಅಮೆರಿಕದ ವಾಯುಪಡೆಗಳು ಇರಾನ್ ಮೇಲೆ ದಾಳಿ ನಡೆಸಲು ಭಾರತದ ವಾಯುಪ್ರದೇಶವನ್ನು ಬಳಸಿಕೊಂಡಿದ್ದು, ಇರಾನ್ ಇದನ್ನು ಮರೆಯುವುದಿಲ್ಲ’ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವ ಪಾಕಿಸ್ತಾನದ ಸಾಮಾಜಿಕ ಬಳಕೆದಾರರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಅದು ಸುಳ್ಳು ಸುದ್ದಿ.
ಅಮೆರಿಕವು ಇರಾನ್ ಮೇಲೆ ವೈಮಾನಿಕ ದಾಳಿ (‘ಮಿಡ್‌ನೈಟ್ ಹ್ಯಾಮರ್’) ನಡೆಸಿದ ಬಗ್ಗೆ ಪೆಂಟಗನ್ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದು, ವಿಮಾನಗಳ ಮಾರ್ಗವನ್ನೂ ಬಿಡುಗಡೆ ಮಾಡಿದೆ. ಅಮೆರಿಕದ ಗೋಪ್ಯ ದಾಳಿಕೋರರು ಲೆಬನಾನ್, ಸಿರಿಯಾ ಮತ್ತು ಇರಾಕ್ ವಾಯುಪ್ರದೇಶಗಳ ಮೂಲಕ ಇರಾನ್‌ಗೆ ಹಾರಿದ್ದರು, ಭಾರತದ ಮೂಲಕ ಅಲ್ಲ ಎಂದು ಅದು ಹೇಳಿದೆ. ಈ ಬಗ್ಗೆ ಭಾರತದ ಪ್ರೆಸ್ ಇನ್ಫರ್ಮೇಷನ್ ಬ್ಯೂರೊ ಕೂಡ ಪ್ರಕಟಣೆ ನೀಡಿದ್ದು, ಅಮೆರಿಕವು ಇರಾನ್ ಮೇಲಿನ ದಾಳಿಗೆ ಭಾರತದ ವಾಯುಪ್ರದೇಶ ಬಳಸಿಕೊಂಡಿದೆ ಎನ್ನುವುದನ್ನು ನಿರಾಕರಿಸಿದೆ. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.