ರಿಷಬ್ ಪಂತ್ ಅವರ ಕಾರು ಅಪಘಾತವಾದಾಗ, ಸ್ಥಳೀಯ ಮುಸ್ಲಿಮರು ಪಂತ್ ಅವರಿಗೆ ಸಹಾಯ ಮಾಡಲಿಲ್ಲ.ಬದಲಿಗೆ ಪಂತ್ ಅವರ ಹಣವನ್ನು ಲೂಟಿ ಮಾಡಿದರು. ನಾವು ರೋಹಿಂಗ್ಯಾ ಮುಸ್ಲಿಮರೆಂಬ ವಿಷಹಾವುಗಳ ಜತೆಗೆ ಬದುಕುತ್ತಿದ್ದೇವೆ. ಈ ಬಗ್ಗೆ ನಾವು ಎಚ್ಚರದಿಂದ ಇರಬೇಕು’ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮುಸ್ಲಿಮರನ್ನು ದೇಶದಿಂದ ಹೊರಗೋಡಿಸಬೇಕು ಎಂದೂ ಕೆಲವರು ಕರೆ ನೀಡಿದ್ದಾರೆ. ಆದರೆ ಈ ಸಂದೇಶಗಳಲ್ಲಿ ಇರುವ ಮಾಹಿತಿ ಸಂಪೂರ್ಣ ಸುಳ್ಳು.
ಈ ಸಂದೇಶಗಳ ಬಗ್ಗೆ ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ರಿಷಬ್ ಪಂತ್ ಅವರ ಕಾರು ಅಪಘಾತವಾದಾಗ ಅಲ್ಲಿದ್ದ ಸ್ಥಳೀಯರು ಮತ್ತು ಉತ್ತರಾಖಂಡ ರಾಜ್ಯ ರಸ್ತೆ ಸಾರಿಗೆ ಬಸ್‌ನ ಸಿಬ್ಬಂದಿ ಅವರಿಗೆ ನೆರವಾಗಿದ್ದಾರೆ. ಪಂತ್ ಅವರ ಬ್ಯಾಗ್‌ನಲ್ಲಿದ್ದ ₹4,000 ನಗದು, ಚಿನ್ನದ ಸರ ಮತ್ತು ಪ್ಲಾಟಿನಂನ ಬ್ರೇಸ್‌ಲೆಟ್ ಅನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಅವರ ಬ್ಯಾಗ್‌ನಲ್ಲಿದ್ದ ಹಣವನ್ನು ಯಾರೂ ಲೂಟಿ ಮಾಡಿಲ್ಲ’ ಎಂದು ಹರಿದ್ವಾರ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. ಆದರೆ, ಈ ಮಾಹಿತಿಯನ್ನು ತಿರುಚಿ, ಮುಸ್ಲಿಮರು ಲೂಟಿ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹರಡಲಾಗಿದೆ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.