ADVERTISEMENT

ಫ್ಯಾಕ್ಟ್‌ ಚೆಕ್‌ | ರುದ್ರಪ್ರಯಾಗದ ಅ‍ಪಘಾತದ್ದು ಎನ್ನಲಾದ ವಿಡಿಯೊ ನಕಲಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 22:14 IST
Last Updated 30 ಜೂನ್ 2025, 22:14 IST
..
..   

ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ 20 ಪ್ರಯಾಣಿಕರಿದ್ದ ಬಸ್ ಅಲಕನಂದ ನದಿಗೆ ಬಿದ್ದು ಹಲವರು ಮೃತಪಟ್ಟರೆ, ಕೆಲವರು ಕಾಣೆಯಾಗಿದ್ದರು. ಈ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಬಸ್‌ವೊಂದು ನದಿಗೆ ಬಿದ್ದಿರುವ ವಿಡಿಯೊ ಹಂಚಿಕೆಯಾಗುತ್ತಿದೆ. ಇದು ರುದ್ರಪ್ರಯಾಗದ ಅ‍ಪಘಾತದ ವಿಡಿಯೊ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಅದು ಸುಳ್ಳು ಸುದ್ದಿ.

ಪೋಸ್ಟ್‌ನಲ್ಲಿರುವ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಕೆಲವರು ಇದೇ ಚಿತ್ರವನ್ನು ಇಂತಹುದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿರುವುದು ಕಂಡುಬಂತು. ನ್ಯೂಸ್ 18 ಪಂಜಾಬಿ, ಅಗ್ನಿಬನ್ ಮುಂತಾದ ಕೆಲವು ಮಾಧ್ಯಮಗಳಲ್ಲಿಯೂ ಇದೇ ಚಿತ್ರವನ್ನು ಪ್ರಸಾರ ಮಾಡಲಾಗಿದೆ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅದರಲ್ಲಿ ಹಲವು ವ್ಯತ್ಯಾಸಗಳಿರುವುದು ಕಂಡುಬಂತು. ಚಿತ್ರದಲ್ಲಿರುವ ಬಸ್, ನೀರಿನ ಹಿನ್ನೆಲೆ ಇವೆಲ್ಲ ವಾಸ್ತವ ಅಲ್ಲ ಎನ್ನುವಂತೆ ಭಾಸವಾಯಿತು. ಇದೇ ಸುಳಿವಿನ ಆಧಾರದಲ್ಲಿ ಚಿತ್ರವನ್ನು ಹೈವ್ ಮಾಡರೇಷನ್ ಮೂಲಕ ಪರಿಶೀಲನೆ ನಡೆಸಿದಾಗ, ಇದನ್ನು ಕೃತಕ ಬುದ್ಧಿಮತ್ತೆಯಿಂದ (ಎಐ) ಸೃಷ್ಟಿಸಲಾಗಿದೆ ಎನ್ನುವುದು ತಿಳಿದುಬಂತು. ಸೈಟ್ ಇಂಜಿನ್ ಎನ್ನುವ ಎಐ ಪತ್ತೆ ಸಾಧನದ ಮೂಲಕ ಪರೀಕ್ಷಿಸಿದಾಗ ಇದು ಎಐ ನಿರ್ಮಿತ ಚಿತ್ರ ಎನ್ನುವುದು ಖಚಿತವಾಯಿತು. ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ವರದಿ ಪ್ರಕಟಿಸಿದೆ.‘

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT