ಮಹಿಳೆಯೊಬ್ಬರು ಮಳೆಯಲ್ಲಿ ನೆನೆಯುತ್ತಾ, ಬರಿಗಾಲಿನಲ್ಲಿ ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಿಳೆಯು ಇರಾನ್‌ನ ಇಸ್ಲಾಮಿಕ್ ಆಡಳಿತದ ವಿರುದ್ಧ ಪ್ರತಿಭಟನೆ ಮಾಡುವ ಸಲುವಾಗಿ ನರ್ತಿಸುತ್ತಿರುವುದಾಗಿ ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಅದು ಸುಳ್ಳು ಸುದ್ದಿ.
ಇನ್‌ವಿಡ್ ಟೂಲ್ ಮೂಲಕ ವಿಡಿಯೊ ಕೀಫ್ರೇಮ್‌ಗಳನ್ನು ವಿಂಗಡಿಸಿ, ಅವನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಅದು 2023ರ ಜುಲೈ 16ರ ವಿಡಿಯೊ ಎನ್ನುವುದು ತಿಳಿಯಿತು. ಫ್ರಾನ್ಸ್ ಮೂಲದ ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್ ತಮ್ಟಾ ಸಬೆಲಾಶ್ವಿಲಿ ಅದನ್ನು ತಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್ ಟಾಕ್ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ್ದರು. ತಮ್ಮ ಹಳೆಯ ವಿಡಿಯೊ ಅನ್ನು ಇರಾನ್–ಇಸ್ರೇಲ್ ಯುದ್ಧಕ್ಕೆ ತಳುಕು ಹಾಕಿ ಸುಳ್ಳು ಪ್ರತಿಪಾದನೆಗಳೊಂದಿಗೆ ಹಂಚಿಕೊಳ್ಳುತ್ತಿರುವ ಬಗ್ಗೆ ತಮ್ಟಾ ಅವರು 2025ರ ಜೂನ್ 9ರಂದು ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ವರದಿ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.