ADVERTISEMENT

ಅಂತರಜಾಲ ಬಳಕೆದಾರರ ಉತ್ತರದಾಯಿತ್ವ ಅಗತ್ಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಅಂತರ್ಜಾಲ ಬಳಕೆದಾರ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಸರ್ವ ಸ್ವತಂತ್ರ. ಆದರೆ, ವ್ಯಕ್ತಪಡಿಸುವ ಅಭಿಪ್ರಾಯಕ್ಕೆ ಆತ ಬದ್ಧನಾಗಿರುವ ಜತೆಗೆ ಉತ್ತರದಾಯಿತ್ವವನ್ನೂ ಹೊಂದಿರಬೇಕು ಎಂದು ಕೇಂದ್ರ ಮಾಹಿತಿ ಮತ್ತು ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ಅಭಿಪ್ರಾಯಟ್ಟಿದಾರೆ.

ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯ ಪಡೆಯುತ್ತಿರುವ ಅಂತರಜಾಲ ನಿಯಂತ್ರಿಸುವ ಆಲೋಚನೆಯಂತೆ  ಅದರ ಬಳಕೆದಾರರು ಕೂಡಾ ಪಾರದರ್ಶಕತೆ ಮತ್ತು ಉತ್ತರದಾಯಿತ್ವ  ಹೊಂದಿರಬೇಕಾಗುತ್ತದೆ ಎಂದರು.
ಇಂಟರ್‌ನೆಟ್ ಸೊಸೈಟಿ, ಮಾಹಿತಿ ಮತ್ತು ಸಂಪರ್ಕ ಸಚಿವಾಲಯದ ಸಹಯೋಗದಲ್ಲಿ ಭಾರತೀಯ ವಾಣಿಜೋದ್ಯಮ ಮಹಾಸಂಘಗಳ ಒಕ್ಕೂಟ (ಎಫ್‌ಐಸಿಸಿಐ) ಗುರುವಾರ ಆಯೋಜಿಸಿದ್ದ ಎರಡು ದಿನಗಳ `ಭಾರತ ಅಂತರ್ಜಾಲ ನಿಯಂತ್ರಣ ಸಮಾವೇಶ-2012~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದೆಲ್ಲಕ್ಕಿಂತ ಹೆಚ್ಚಾಗಿ ಅಂತರಜಾಲ  ನಿಯಂತ್ರಿಸುತ್ತಿರುವ ಆಡಳಿತ ವ್ಯವಸ್ಥೆ, ಸರ್ಕಾರ, ನಾಗರಿಕ ಸಮಾಜ,  ಮತ್ತು ಬಳಕೆದಾರರಲ್ಲಿ ಒಮ್ಮತವಿರಬೇಕು ಎಂದು ಸಿಬಲ್ ಸಲಹೆ ಮಾಡಿದರು.  ಮಾಹಿತಿ ಮತ್ತು ಸಂಪರ್ಕ ಕ್ಷೇತ್ರದ  ತಜ್ಞರು `ಭವಿಷ್ಯದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಅಂತರಜಾಲ~  ಕುರಿತು ವಿಷಯ ಮಂಡಿಸಿದರು.  
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.