ADVERTISEMENT

ಅದಿರು ರಫ್ತು: ವಿವರ ಕೇಳಿದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 19:30 IST
Last Updated 13 ಅಕ್ಟೋಬರ್ 2011, 19:30 IST

ನವದೆಹಲಿ: ಗೋವಾ ಬಂದರಿನ ಮೂಲಕ ರಫ್ತಾಗಿರುವ ಕರ್ನಾಟಕದ ಕಬ್ಬಿಣ ಅದಿರಿನ ವಿವರವನ್ನು ಕೇಂದ್ರ ಗಣಿಇಲಾಖೆ ಕೇಳಿರುವುದರಿಂದ ಎರಡೂ ರಾಜ್ಯದ ಗಣಿ ಉದ್ಯಮಿಗಳು, ರಾಜಕಾರಣಿಗಳ ನಡುವಿನ ಅಕ್ರಮ ವ್ಯವಹಾರಗಳು ಬಯಲಿಗೆ ಬರುವ ಸಾಧ್ಯತೆ ಇದೆ.

ಗೋವಾದ ವಿವಿಧ ಬಂದರುಗಳ ಮೂಲಕ ದೊಡ್ಡ ಪ್ರಮಾಣದ ಅದಿರು ರಫ್ತು ಮಾಡಲಾಗಿದೆ ಎಂಬ ಆಪಾದನೆಯ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಇಲ್ಲಿಂದ ರಫ್ತಾಗಿರುವ ಕರ್ನಾಟಕದ ಅದಿರಿನ ವಿವರ ಕೇಳಲಾಗಿದೆ.

2005ರಿಂದ 2011ರವರೆಗಿನ ಅದಿರು ರಫ್ತು ವಹಿವಾಟಿನ ಅಂಕಿಸಂಖ್ಯೆಯನ್ನು ಗೋವಾ ಸರ್ಕಾರ ಕೇಂದ್ರಕ್ಕೆ ನೀಡಬೇಕಾಗಿದೆ. ಎಷ್ಟು ಬೋಗಿ ಕಬ್ಬಿಣ ಅದಿರನ್ನು ಕರ್ನಾಟಕದಿಂದ ಗೋವಾಗೆ ಸಾಗಿಸಲಾಗಿದೆ ಎಂಬ ವಿವರ ನೀಡುವಂತೆ ರೈಲ್ವೆ ಇಲಾಖೆಯನ್ನೂ ಕೋರಲಾಗಿದೆ.
 
ಕರ್ನಾಟಕದಲ್ಲಿ ಅಕ್ರಮವಾಗಿ ತೆಗೆದ ಉತ್ತಮ ಅದಿರನ್ನು ಗೋವಾ ಬಂದರಿನ ಮೂಲಕ ಫ್ತು ಮಾಡಿರುವ ಬಗ್ಗೆ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ತಮ್ಮ ವರದಿಯಲ್ಲಿ ಪ್ರಸ್ತಾಪ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.