ADVERTISEMENT

ಅಮಿತ್ ಶಾ–ಉದ್ಧವ್ ಭೇಟಿ ಇಂದು

ಮೈಮನಸ್ಯ ಬದಿಗಿಡಲಿವೆಯಾ ಮಿತ್ರಪಕ್ಷಗಳು?

ಪಿಟಿಐ
Published 5 ಜೂನ್ 2018, 19:30 IST
Last Updated 5 ಜೂನ್ 2018, 19:30 IST
ಉದ್ಧವ್ ಠಾಕ್ರೆ (ಎಡ ಚಿತ್ರ) ಮತ್ತು ಅಮಿತ್‌ ಶಾ
ಉದ್ಧವ್ ಠಾಕ್ರೆ (ಎಡ ಚಿತ್ರ) ಮತ್ತು ಅಮಿತ್‌ ಶಾ   

ಮುಂಬೈ: ಮುಂಬರುವ ಲೋಕಸಭಾ ಚುನಾವಣೆಗೆ ಮಿತ್ರಪಕ್ಷಗಳನ್ನು ಒಗ್ಗೂಡಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಂದಾಗಿದ್ದಾರೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಶಿರೋಮಣಿ ಅಕಾಲಿದಳ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಭೇಟಿ ಮಾಡಲಿದ್ದಾರೆ. ಗುರುವಾರ ಮಾತುಕತೆ ನಿಗದಿಯಾಗಿದೆ.

ಉದ್ಧವ್ ಠಾಕ್ರೆ ಅವರನ್ನು ಶಾ ಬುಧವಾರ ಭೇಟಿಯಾಗಲಿದ್ದಾರೆ. ವೈಮನಸ್ಯ ಹೊಂದಿರುವ ಎರಡೂ ಮಿತ್ರಪಕ್ಷಗಳು ಪಾಲ್ಘರ್ ಉಪ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಬಳಿಕ ನಡೆಯುತ್ತಿರುವ ಈ ಮಾತುಕತೆ ಮಹತ್ವದ್ದಾಗಿದೆ.

‘ಭೇಟಿಗೆ ಅಮಿತ್ ಶಾ ಸಮಯ ಕೇಳಿದ್ದರು. ಹೀಗಾಗಿ ಬುಧವಾರ ಸಂಜೆ ಉದ್ಧವ್ ನಿವಾಸದಲ್ಲಿ ಮಾತುಕತೆ ನಿಗದಿಯಾಗಿದೆ’ ಎಂದು ಸೇನಾ ಸಂಸದ ಸಂಜಯ್ ರಾವತ್‌ ಹೇಳಿದ್ದಾರೆ. ನಾಲ್ಕು ವರ್ಷಗಳ ನಂತರ ಠಾಕ್ರೆ ಅವರನ್ನು ಭೇಟಿಯಾಗುವ ಅಗತ್ಯವೇನಿದೆ ಎಂದೂ ಅವರು ಪ್ರಶ್ನಿಸಿದ್ದಾರೆ.

ADVERTISEMENT

ಬಿಜೆಪಿಯು ದೇಶವ್ಯಾಪಿ ಹಮ್ಮಿಕೊಂಡಿರುವ ‘ಜನಬೆಂಬಲಕ್ಕಾಗಿ ಸಂಪರ್ಕ’ ಅಭಿಯಾನದ ಭಾಗವಾಗಿ ಶಾ–ಉದ್ಧವ್ ಭೇಟಿಯಾಗುತ್ತಿದ್ದಾರೆ. ಇತ್ತೀಚಿನ ಲೋಕಸಭಾ ಉಪಚುನಾವಣೆಗಳಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಸುಧೀರ್ ಮುಂಗಟಿವಾರ್ ಅವರು ಹೇಳಿದ್ದಾರೆ.

ನಿಲುವಿನಲ್ಲಿ ಬದಲಾವಣೆ ಇಲ್ಲ?:  ಮುಂಬರುವ ಚುನಾವಣೆಗಳಲ್ಲೂ ಶಿವಸೇನಾ ಏಕಾಂಗಿಯಾಗಿ ಸ್ಪರ್ಧಿಸುತ್ತದೆಯೇ ಎಂಬ  ಪ್ರಶ್ನೆಗೆ, ‘ಪಕ್ಷದ ಮುಖ್ಯಸ್ಧ ಉದ್ಧವ್ ಅವರು ಜನರ ಭಾವನೆಗಳಿಗೆ ಧಕ್ಕೆಯಾಗದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಬಹುಶಃ ಈಗಿರುವ ನಿಲುವು ಬದಲಾಗಲಿಕ್ಕಿಲ್ಲ’ ಎಂದು ಸಂಜಯ್ ರಾವತ್‌ ಹೇಳಿದ್ದಾರೆ.
*
ನಿಲುವಿನಲ್ಲಿ ಬದಲಾವಣೆ ಇಲ್ಲ? 
ಮುಂಬರುವ ಚುನಾವಣೆಗಳಲ್ಲೂ ಶಿವಸೇನಾ ಏಕಾಂಗಿಯಾಗಿ ಸ್ಪರ್ಧಿಸುತ್ತದೆಯೇ ಎಂಬ  ಪ್ರಶ್ನೆಗೆ, ‘ಪಕ್ಷದ ಮುಖ್ಯಸ್ಧ ಉದ್ಧವ್ ಅವರು ಜನರ ಭಾವನೆಗಳಿಗೆ ಧಕ್ಕೆಯಾಗದ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಬಹುಶಃ ಈಗಿರುವ ನಿಲುವು ಬದಲಾಗಲಿಕ್ಕಿಲ್ಲ’ ಎಂದು ಸಂಜಯ್ ರಾವತ್‌ ಹೇಳಿದ್ದಾರೆ.

‘ನಾವು ಏಕಾಂಗಿಯಾಗಿ ಸ್ಪರ್ಧಿಸಬಲ್ಲೆವು ಎಂಬುದನ್ನು ಪಾಲ್ಘಾರ್‌ ಉಪಚುನಾವಣೆಯಲ್ಲಿ ತೋರಿಸಿದ್ದೇವೆ. ನಾವು ಅಲ್ಲಿ ಸೋತಿರಬಹುದು, ಆದರೆ ದೊಡ್ಡ ಸಂದೇಶವನ್ನು ರವಾನಿಸಿದ್ದೇವೆ. ಚುನಾವಣೆಯಲ್ಲಿ ಎಂದೂ ಸ್ಪರ್ಧಿಸದ ಕ್ಷೇತ್ರದಲ್ಲಿ ಲಕ್ಷಗಟ್ಟಲೆ ಮತಗಳನ್ನು ಪಡೆದಿದ್ದೇವೆ’ ಎಂದು ಹೇಳಿದ್ದಾರೆ.

ಮೇ 28ರ ಚುನಾವಣೆಯಲ್ಲಿ ಶಿವಸೇನಾ ಅಭ್ಯರ್ಥಿ ಶ್ರೀನಿವಾಸ ವನಾರಾ ಅವರು 2,43,210 ಮತ ಗಳಿಸಿ, ಬಿಜೆಪಿ ಅಭ್ಯರ್ಥಿ ರಾಜೇಂದ್ರ ಗವಿತ್ ಎದುರು 29 ಸಾವಿರ ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು.
*
ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಒಂದೊಂದಾಗಿ ಬಿಜೆಪಿಯನ್ನು ಬರಿದಾಗಿಸುತ್ತಿವೆ.
ಸಂಜಯ್ ರಾವತ್‌, ಶಿವಸೇನಾ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.