ADVERTISEMENT

ಆಂತರಿಕ ನೂಲು ಪೂರೈಕೆ ಹೆಚ್ಚಿಸಲು ಹತ್ತಿ ರಫ್ತು ನಿಷೇದ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 9:00 IST
Last Updated 5 ಮಾರ್ಚ್ 2012, 9:00 IST

 ನವದೆಹಲಿ, (ಪಿಟಿಐ): ಆಂತರಿಕ ಮಾರುಕಟ್ಟೆಯಲ್ಲಿ ನೈಸರ್ಗಿಕ ನೂಲು ಪೂರೈಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸೋಮವಾರ ಹತ್ತಿಯ ರಫ್ತನ್ನು ನಿಷೇಧಿಸಿ ಆದೇಶ ಹೊರಡಿಸಿದೆ. 

~ಸರ್ಕಾರ ಮತ್ತೆ ಆದೇಶ ಹೊರಡಿಸುವವರೆಗೂ ಹತ್ತಿಯನ್ನು ರಫ್ತು ಮಾಡುವಂತಿಲ್ಲ~ ಎಂದು ವಿದೇಶ ವ್ಯಾಪಾರ ನಿರ್ದೇಶನಾಲಯವು (ಡಿಜಿಎಫ್ ಟಿ) ತನ್ನ ಆದೇಶದಲ್ಲಿ ತಿಳಿಸಿದೆ.

ಇದಲ್ಲದೇ ಈಗಾಗಲೇ ಹತ್ತಿ ರಫ್ತುಗಾಗಿ ಅನುಮತಿ ಪಡೆದವರಿಗೂ ಕೂಡ ಈ ನಿಷೇಧ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಭಾರತವು ಈಗಾಗಲೇ ಪ್ರಸಕ್ತ ವರ್ಷ ಅಕ್ಟೋಬರ್- ಸೆಪ್ಟಂಬರ್ ಅವಧಿಯಲ್ಲಿ ಸುಮಾರು 85 ಲಕ್ಷ ಬೇಲ್  ಹತ್ತಿಯನ್ನು ರಫ್ತು ಮಾಡಿದೆ. ಕಳೆದ 2010-11ರ ಅವಧಿಯಲ್ಲಿ  66 ಲಕ್ಷ ಬೇಲ್ ಹತ್ತಿಯನ್ನು ರಫ್ತು ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT