ADVERTISEMENT

ಆಕಾಶವಾಣಿ ಸಾಗರೋತ್ತರ ಪ್ರಸಾರ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST

ನವದೆಹಲಿ : ಭಾರತದ ರಾಜತಾಂತ್ರಿಕ ಯತ್ನಕ್ಕೆ ಒತ್ತಾಸೆಯಾಗಿ ಹಾಗೂ ವಿದೇಶಗಳಲ್ಲಿರುವ ಭಾರತೀಯರನ್ನು ತಲುಪುವ ನಿಟ್ಟಿನಲ್ಲಿ ಆಕಾಶವಾಣಿಯು ವಿದೇಶಗಳಲ್ಲಿನ ಪ್ರಸಾರ ಸೇವೆಗಳನ್ನು ವಿಸ್ತರಿಸಲು ಚಿಂತನೆ ನಡೆಸಿದೆ.

‘ಜಪಾನ್, ಜರ್ಮನಿ, ಕೆನಡಾ ಅಲ್ಲದೆ ಮಾಲ್ಡೀವ್ಸ್, ದಕ್ಷಿಣ ಆಫ್ರಿಕಾ ಸೇರಿದಂತೆ ಕೆಲವು ಕಾಮನ್‌ವೆಲ್ತ್‌ ರಾಷ್ಟ್ರಗಳಿಗೆ ಪ್ರಸಾರ ಸೇವೆಯನ್ನು ವಿಸ್ತರಿಸಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಆಕಾಶವಾಣಿಯ ಸಾಗರೋತ್ತರ ಸೇವಾ ವಿಭಾಗದ ನಿರ್ದೇಶಕ ಅಮ್ಲನ್‌ಜ್ಯೋತಿ ಮಜುಮ್‌ದಾರ್ ತಿಳಿಸಿದ್ದಾರೆ.

‘ಪಾಕಿಸ್ತಾನವು ಆಫ್ರಿಕಾ ರಾಷ್ಟ್ರಗಳಲ್ಲಿ ತನ್ನ ಆಕಾಶವಾಣಿ ಪ್ರಸಾರವನ್ನು ವಿಸ್ತರಿಸಿದೆ. ಹಾಗಿರುವಾಗ ನಾವು ಕೆಲವು ರಾಷ್ಟ್ರಗಳಿಗಷ್ಟೇ ಸೀಮಿತವಾಗಿರುವುದು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

ಸದ್ಯ ಆಕಾಶವಾಣಿಯು 150 ದೇಶಗಳಲ್ಲಿ 27 ಭಾಷೆಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಅವುಗಳಲ್ಲಿ ನೆರೆಯ ರಾಷ್ಟ್ರಗಳ 14 ಭಾಷೆಗಳು ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.