ADVERTISEMENT

ಆರ್‌ಬಿಐ ಬಡ್ಡಿದರ ಬದಲಾವಣೆ ಇಲ್ಲ: ರಾಜನ್‌

ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2016, 10:19 IST
Last Updated 9 ಆಗಸ್ಟ್ 2016, 10:19 IST
ಆರ್‌ಬಿಐ ಬಡ್ಡಿದರ ಬದಲಾವಣೆ ಇಲ್ಲ: ರಾಜನ್‌
ಆರ್‌ಬಿಐ ಬಡ್ಡಿದರ ಬದಲಾವಣೆ ಇಲ್ಲ: ರಾಜನ್‌   

ಮುಂಬೈ(ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ರಘುರಾಂ ರಾಜನ್ ಅವರು ಮಂಗಳವಾರ ತಮ್ಮ ಕೊನೆಯ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ನಡೆಸಿದ್ದು, ಬಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

7ನೇ ವೇತನ ಆಯೋಗ ಜಾರಿಯಿಂದ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳವಾಗಲಿದ್ದು, 2017ರ ಮಾರ್ಚ್‌ಗೆ ಹಣದುಬ್ಬರ ಶೇಕಡಾ 5ರಷ್ಟು ಹೆಚ್ಚಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ನಿರ್ದಿಷ್ಟ ಸಂದರ್ಭದಲ್ಲಿ ನೀತಿ ಕ್ರಮಕ್ಕೆ ಕಾಯುತ್ತಿರುವಾಗ ರೆಪೊ ದರವನ್ನು ಬದಲಾಯಿಸದೇ ಇರುವುದು ಉತ್ತಮ ಎಂದು ಅವರು ಹೇಳಿದ್ದಾರೆ.

ಸೆ. 4ರಂದು ರಾಜನ್ ಅಧಿಕಾರಾವಧಿ ಮುಕ್ತಾಯವಾಗಲಿದೆ. ಹೀಗಾಗಿ, ಅವರ ಕೊನೆಯ ಹಣಕಾಸು ನೀತಿ ಪರಾಮರ್ಶೆಯಲ್ಲಿ ಪ್ರಕಟವಾಗುವ ನಿರ್ಧಾರದ ಬಗ್ಗೆ ತಜ್ಞರಲ್ಲಿ ಹೆಚ್ಚು ಕುತೂಹಲ ಮೂಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.