ADVERTISEMENT

ಉತ್ತರಾಖಂಡದಲ್ಲಿ 64 ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದ ಕೇದಾರ ಕಣಿವೆ ಪ್ರದೇಶದಲ್ಲಿ 64 ಶವಗಳು ಪತ್ತೆಯಾಗಿವೆ ಎಂದು ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

`ಜೂನ್ ತಿಂಗಳಲ್ಲಿ ಬಂದಿದ್ದ ಭಾರಿ ಪ್ರವಾಹದಿಂದ ಪಾರಾಗಲು ಭಕ್ತರು ಬೆಟ್ಟ ಹತ್ತಿ ಕುಳಿತಿದ್ದಿರಬಹುದು.
ಬಳಿಕ ಕೊರೆಯುವ ಚಳಿಗೆ ಅವರು ಸಾವನ್ನಪ್ಪಿರಬಹುದು' ಎಂದು ಐ.ಜಿ ಮೀನಾ ಆರ್.ಎಸ್. ತಿಳಿಸಿದ್ದಾರೆ.

ಕೇದಾರನಾಥ್ ಮತ್ತು ರಾಮಬಡಾ ಪ್ರದೇಶಗಳಲ್ಲಿ ಎರಡು ದಿನಗಳ ಅವಧಿಯಲ್ಲಿ ಒಟ್ಟು 64 ಶವಗಳು ಪತ್ತೆಯಾಗಿದ್ದು, ಅವುಗಳನ್ನು ದಹಿಸಲಾಗಿದೆ' ಎಂದು ಹೇಳಿದ್ದಾರೆ.

`ಸತತ ಮಳೆಯಿಂದಾಗಿ ಇಲ್ಲಿಯವರೆಗೆ ಕಣಿವೆ ಪ್ರದೇಶಗಳಲ್ಲಿ ಶವಗಳ ಹುಡುಕಾಟ ನಡೆಸಿರಲಿಲ್ಲ. ಆದರೆ, ಈಗ ಮಳೆ ನಿಂತಿರುವುದರಿಂದ ಮತ್ತೆ ಶವಗಳ ಹುಡುಕಾಟ ಪುನರಾರಂಭಿಸಲಾಗುವುದು. ಜಂಗಲ್‌ಚಟ್ಟಿ, ರಾಮಬಡಾ, ಗೌರಿಗಾಂವ್ ಮತ್ತು ಭೀಮ್‌ಬಲಿ ಪ್ರದೇಶಗಳಲ್ಲಿ ಪತ್ತೆ ಕಾರ್ಯ ಕೈಗೊಳ್ಳಲಾಗುವುದು. ಈ ಕಾರ್ಯದಲ್ಲಿ ಸುಮಾರು 30 ಪೊಲೀಸರು ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.