ADVERTISEMENT

ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಬೇಕು: ರಾಜ್ಯಪಾಲ ರಾಮ್‌ ನಾಯಕ್

ಏಜೆನ್ಸೀಸ್
Published 5 ಅಕ್ಟೋಬರ್ 2017, 13:16 IST
Last Updated 5 ಅಕ್ಟೋಬರ್ 2017, 13:16 IST
ರಾಮ್‌ ನಾಯಕ್ (ಸಂಗ್ರಹ ಚಿತ್ರ)
ರಾಮ್‌ ನಾಯಕ್ (ಸಂಗ್ರಹ ಚಿತ್ರ)   

ಕಾನ್ಪುರ: ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಬೇಕಾದ ಅವಶ್ಯಕತೆ ಇದೆ ಎಂದು ಅಲ್ಲಿನ ರಾಜ್ಯಪಾಲ ರಾಮ್ ನಾಯಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಈ ಹಿಂದೆಯೂ ನಾನು ಮಾತನಾಡಿದ್ದೇನೆ. ಅದನ್ನು ರಾಜ್ಯದಲ್ಲಿ ಸುಧಾರಿಸಬೇಕಾದ ಅಗತ್ಯವಿದೆ ಎಂದು ಈಗಲೂ ಹೇಳುತ್ತೇನೆ’ ಎಂದು ಹೇಳಿದರು.

ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ರಾಜ್ಯಪಾಲರಾಗಿ ರಾಮ್‌ ನಾಯಕ್ ಅವರನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ನೇಮಕ ಮಾಡಿದೆ.

ADVERTISEMENT

‘ಸುರಕ್ಷಿತ ಜೀವನ ನಡೆಸುವ ಹಕ್ಕು ಪ್ರತಿಯೊಬ್ಬ ಮಹಿಳೆಗೂ ಇದೆ. ಅವರಿಗೆ ಭದ್ರತೆ ಒದಗಿಸುವುದು ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿ’ ಎಂದು ನಾಯಕ್ ಹೇಳಿದರು.

ಬೆಳೆ ಸಾಲ ಪಡೆದ ರೈತರಿಗೆ ನೆರವು ನೀಡುವ ಯೋಜನೆ ಅಡಿ ಕನಿಷ್ಠ ಮೊತ್ತ ಒದಗಿಸಲಾಗಿದೆ ಎಂಬ ಆರೋಪಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರೈತರಿಗೆ ಕೇವಲ ₹ 2 ಅಥವಾ ₹ 5 ನೀಡಲಾಗಿದೆ ಎಂಬ ಆರೋಪದ ಬಗ್ಗೆ ನಿಮ್ಮಲ್ಲಿ ದಾಖಲೆ ಇದ್ದರೆ ಒದಗಿಸಿ. ನನ್ನ ಗಮನಕ್ಕೆ ತನ್ನಿ. ನಾನು ತನಿಖೆ ನಡೆಸುತ್ತೇನೆ. ಆಧಾರವಿಲ್ಲದೆ ಮಾತನಾಡಬೇಡಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.