ADVERTISEMENT

ಒಇಸಿಡಿಗೆ ಭಾರತದ ಮಹಿಳಾ ಅಧಿಕಾರಿ ನೇಮಕ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಕಪ್ಪು ಹಣದ ವಿರುದ್ಧ ನೀತಿ ರೂಪಿಸುವ ಜಾಗತಿಕ ಹಣಕಾಸು ಮಂಡಳಿಯ (ಒಇಸಿಡಿ) ಪ್ರಮುಖ ವಿಭಾಗದ ಮುಖ್ಯಸ್ಥರಾಗಿ ಭಾರತದ ಹಿರಿಯ ಐಆರ್‌ಎಸ್ ಅಧಿಕಾರಿ ಮೋನಿಕಾ ಭಾಟಿಯಾ ಅವರನ್ನು ನೇಮಕ ಮಾಡಲಾಗಿದೆ.

1990ರ ತಂಡದ ಭಾರತೀಯ ಕಂದಾಯ ಸೇವೆಯ ಅಧಿಕಾರಿಯಾಗಿರುವ ಮೋನಿಕಾ, ಪ್ಯಾರಿಸ್ ಮೂಲದ ತೆರಿಗೆ ನೀತಿ ಮತ್ತು ಆಡಳಿತ ಕೇಂದ್ರದ (ಸಿಟಿಪಿಎ) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.