ನವದೆಹಲಿ (ಪಿಟಿಐ): ಒರಿಸ್ಸಾ ರಾಜ್ಯವನ್ನು ಇನ್ನು ಮುಂದೆ ‘ಒಡಿಶಾ’ ಎಂದು ಹಾಗೂ ಒರಿಯಾ ಭಾಷೆಯಲ್ಲಿ ‘ಒಡಿಯಾ’ ಎಂದು ಕರೆಯವ ನಿಟ್ಟಿನಲ್ಲಿನ ಸಂವಿಧಾನದ ತಿದ್ದುಪಡಿಗೆ ಸಂಸತ್ ಮಂಗಳವಾರ ಅನುಮೋದನೆ ನೀಡಿದೆ.
ಸಂಬಂಧಿಸಿದ ಮಸೂದೆಯನ್ನು ಲೋಕಸಭೆ ಕಳೆದ ವರ್ಷ ನವಂಬರ್ 9ರಂದು ಅನುಮೋದಿಸಿ, ಅಂಗೀಕಾರಕ್ಕಾಗಿ ರಾಜ್ಯಸಭೆಗೆ ಕಳುಹಿಸಿತ್ತು. ಮಾರ್ಚ್ 24ರಂದು ರಾಜ್ಯಸಭೆಯು ತಿದುಪಡಿಯೊಂದಿಗೆ ಮಸೂದೆಯನ್ನು ಅಂದೇ ಲೋಕಸಭೆಗೆ ಮರಳಿಸಿತ್ತು.
ಮಸೂದೆಯ ಪರವಾಗಿ 301 ಸದಸ್ಯರ ಮತವನ್ನು ಚಲಾಯಿಸಿದ್ದು, ವಿರುದ್ಧವಾಗಿ ಯಾವುದೇ ಮತಗಳು ಚಲಾವಣೆಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.