ADVERTISEMENT

ಕಡಲ ಕಿನಾರೆಗಳಲ್ಲಿ ಕಸದ್ದೇ ಕಾರುಬಾರು

ಸಮುದ್ರ ಮೀನುಗಾರಿಕೆ ಕೇಂದ್ರ ಸಂಶೋಧನಾ ಸಂಸ್ಥೆಯ ವರದಿಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ಕಡಲ ಕಿನಾರೆಗಳಲ್ಲಿ ಕಸದ್ದೇ ಕಾರುಬಾರು
ಕಡಲ ಕಿನಾರೆಗಳಲ್ಲಿ ಕಸದ್ದೇ ಕಾರುಬಾರು   

ರಾಜ್ಯದ ಮುಕ್ಕಾಲು ಪಾಲು ಕಡಲತೀರಗಳು ಕಸದಿಂದ ತುಂಬಿವೆ. ಸುಮಾರು ಅರ್ಧದಷ್ಟು ಕಡಲ ತೀರಗಳಲ್ಲಿ ಭಾರಿ ಪ್ರಮಾಣದ ಕಸ ಇದೆ ಎಂಬುದು ‘ಸಮುದ್ರ ಮೀನುಗಾರಿಕೆ ಕೇಂದ್ರ ಸಂಶೋಧನಾ ಸಂಸ್ಥೆ–ಐಸಿಎಆರ್’ ನಡೆಸಿದ ಸಂಶೋಧನೆಯಲ್ಲಿ ಪತ್ತೆಯಾಗಿದೆ. ರಾಜ್ಯದ ಎಲ್ಲಾ ಕಡಲ ತೀರಗಳ ಪ್ರತಿ ಚದರ ಮೀಟರ್‌ ಪ್ರದೇಶದಲ್ಲಿ ಎಷ್ಟು ಕಸ ಶೇಖರವಾಗಿದೆ ಎಂಬುದನ್ನು ಪತ್ತೆ ಮಾಡಿ ಐಸಿಎಆರ್ ಈ ವರದಿ ಸಿದ್ಧಪಡಿಸಿದೆ.

ಉಡುಪಿ, ದಕ್ಷಿಣ ಕನ್ನಡದಲ್ಲಿ ಒಂದು ಕಡಲತೀರವೂ ಸ್ವಚ್ಛವಿಲ್ಲ
* ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮತ್ತು ಕುಮಟಾ ಕಡಲ ತೀರಗಳಲ್ಲಿ ಸ್ವಲ್ಪ ಪ್ರಮಾಣದ ಕಸ ಪತ್ತೆಯಾಗಿದೆ. ಜಿಲ್ಲೆಯ ಉಳಿದೆಲ್ಲಾ ಕಡಲ ತೀರಗಳು ಸ್ವಚ್ಛವಾಗಿವೆ.

* ಉಡುಪಿಯ 9 ಕಡಲತೀರಗಳಲ್ಲಿ ಭಾರಿ ಪ್ರಮಾಣದ ಕಸ ಇದೆ. 2 ಕಡಲ ತೀರಗಳು ಕಸದಿಂದ ತುಂಬಿವೆ. ಒಂದರಲ್ಲಿ ಸಾಧಾರಣ ಪ್ರಮಾಣ ಮತ್ತು ಎರಡರಲ್ಲಿ ಸ್ವಲ್ಪ ಪ್ರಮಾಣದ ಕಸ ಇದೆ. ಜಿಲ್ಲೆಯ ಒಂದೂ ಕಡಲ ತೀರ ಸ್ವಚ್ಛವಾಗಿಲ್ಲ.

ADVERTISEMENT

* ದಕ್ಷಿಣ ಕನ್ನಡದ ನಾಲ್ಕು ಕಡಲ ತೀರಗಳಲ್ಲಿ ಭಾರಿ ಪ್ರಮಾಣದ ಕಸ ಶೇಖರವಾಗಿದೆ. ಮೂರರಲ್ಲಿ ಸಾಧಾರಣ ಪ್ರಮಾಣ ಮತ್ತು ಒಂದರಲ್ಲಿ ಸ್ವಲ್ಪ ಪ್ರಮಾಣದ ಕಸ ಶೇಖರವಾಗಿದೆ. ಜಿಲ್ಲೆಯ ಒಂದೂ ಕಡಲ ತೀರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡಿಲ್ಲ.

ಆಧಾರ: ಸಮುದ್ರ ಮೀನುಗಾರಿಕೆ ಕೇಂದ್ರ ಸಂಶೋಧನಾ ಸಂಸ್ಥೆಯ ಸಂಶೋಧನಾ ವರದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.