ADVERTISEMENT

ಕಾಣೆಯಾದ ಮಕ್ಕಳ ಪತ್ತೆಗೆ ಹೊಸ ಆ್ಯಪ್‌

ಏಜೆನ್ಸೀಸ್
Published 8 ಜುಲೈ 2017, 10:38 IST
Last Updated 8 ಜುಲೈ 2017, 10:38 IST
ಕಾಣೆಯಾದ ಮಕ್ಕಳ ಪತ್ತೆಗೆ ಹೊಸ ಆ್ಯಪ್‌
ಕಾಣೆಯಾದ ಮಕ್ಕಳ ಪತ್ತೆಗೆ ಹೊಸ ಆ್ಯಪ್‌   

ಚೆನ್ನೈ: ಮಕ್ಕಳ ನಾಪತ್ತೆ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಕಾಣೆಯಾಗುವ ಮಕ್ಕಳ ಮಾಹಿತಿಯನ್ನು ಒಂದೆಡೆ ಸೇರಿಸಿ ಹುಡುಕಾಟಕ್ಕೆ ಸಹಕಾರಿಯಾಗುವ ಮುಖ ಗುರುತಿಸುವ(ಫೇಸ್‌ ರೆಕಗ್ನಿಷನ್‌) ಸಾಫ್ಟ್‌ವೇರ್‌ನ್ನು ತಂಡವೊಂದು ಸಿದ್ಧಪಡಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೆಬ್‌ಸೈಟ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಿಂದ ಕಾಣೆಯಾಗಿರುವ ಮಕ್ಕಳ ಕುರಿತಾದ ಮಾಹಿತಿ ಸಂಗ್ರಹಿಸಿರುವ ವಿಜಯ್‌ ಜ್ಞಾನದೇಶಿಕನ್‌ ಮತ್ತು ಅವರ ತಂಡ, ಈವರೆಗೆ 3 ಲಕ್ಷಕ್ಕೂ ಅಧಿಕ ಫೋಟೋಗಳ ಸಂಗ್ರಹ ಹೊಂದಿದ್ದಾರೆ.

ಅಭಿವೃದ್ಧಿ ಪಡಿಸಲಾಗಿರುವ ‘facetagr’ ಸಾಫ್ಟ್‌ವೇರ್‌ನಲ್ಲಿ ಕಾಣೆಯಾದ ಮಗುವಿನ ಫೋಟೋ ಅಪ್‌ಲೋಡ್‌ ಮಾಡಿದರೆ. ಮುಖ ಗುರುತಿಸುವ ತಂತ್ರಜ್ಞಾನದ ಮೂಲಕ ಹೋಲಿಕೆ ಇರುವ ಮಕ್ಕಳ ಮಾಹಿತಿ ಹಾಗೂ ಚಿತ್ರಗಳನ್ನು ಪಡೆಯಬಹುದಾಗಿದೆ.

ADVERTISEMENT

ದೇಶದಾದ್ಯಂತ ‘facetagr’ ಅಪ್ಲಿಕೇಷನ್‌ 100 ಮಕ್ಕಳನ್ನು ಪತ್ತೆ ಮಾಡುವಲ್ಲಿ ಸಹಕಾರಿಯಾಗಿದೆ.  ನೇಪಾಳದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡುವಾಗ ರಕ್ಷಿಸಲಾಗಿರುವ 15 ಸಾವಿರ ಮಕ್ಕಳ ಕುಟುಂಬಗಳನ್ನು ಪತ್ತೆ ಮಾಡುವ ಕಾರ್ಯದಲ್ಲಿ ಪ್ರಸ್ತುತ ವಿಜಯ್‌ ಅವರ ತಂಡ ನಿರತವಾಗಿದೆ.

ಕಾಣೆಯಾದ ಮಕ್ಕಳ ಪತ್ತೆಗಾಗಿ ಕೇಂದ್ರದ ‘ಖೋಯಾ ಪಾಯಾ’(ಕಾಣೆಯಾದ ಮತ್ತು ಪತ್ತೆಯಾದ) ವೆಬ್‌ಸೈಟ್‌ ಕಾರ್ಯನಿರ್ವಹಿಸುತ್ತಿದೆ. ಸುಮಾರು 2 ಲಕ್ಷ ಫೋಟೋ ಹಾಗೂ ಮಾಹಿತಿಯನ್ನು ವೆಬ್‌ಸೈಟ್‌ ಒಳಗೊಂಡಿದೆ. ಆದರೆ, ಫೇಸ್‌ ರೆಕಗ್ನಿಷನ್‌ ತಂತ್ರಜ್ಞಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೆಬ್‌ಸೈಟ್‌ಗಳು ಅಳವಡಿಸಿಕೊಳ್ಳುವ ಅಗತ್ಯವಿದೆ.

ಕಾಣೆಯಾದವರ ಮಾಹಿತಿ: ಮಾಹಿತಿ ಪ್ರಕಾರ, ದೇಶದಲ್ಲಿ 2012ರ ಜನವರಿಯಿಂದ 2017ರ ಮಾರ್ಚ್‌ ವರೆಗೆ 2.5 ಲಕ್ಷ ಮಕ್ಕಳು ಕಾಣಿಯಾಗಿದ್ದಾರೆ. ಅಂದರೆ, ಗಂಟೆಗೆ ಸರಾಸರಿ 5 ಮಕ್ಕಳು ನಾಪತ್ತೆಯಾಗಿದ್ದಾರೆ.

ಪತ್ತೆ ಕಾರ್ಯಾಚರಣೆ ನಡೆದಿದ್ದರೂ 73 ಸಾವಿರ ಮಕ್ಕಳು ಈವರೆಗೂ ಪತ್ತೆಯಾಗಿಲ್ಲ.

ಕಾಣೆಯಾಗಿರುವ ಮಕ್ಕಳ ಪತ್ತೆಗೆ ವೆಬ್‌ಸೈಟ್‌: www.facetagr.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.