ADVERTISEMENT

ಕಾಲೇಜುಗಳಲ್ಲಿ ರಾಜಕಾರಣ ಬೇಡ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 10:46 IST
Last Updated 4 ಏಪ್ರಿಲ್ 2013, 10:46 IST
ಕಾಲೇಜುಗಳಲ್ಲಿ ರಾಜಕಾರಣ ಬೇಡ
ಕಾಲೇಜುಗಳಲ್ಲಿ ರಾಜಕಾರಣ ಬೇಡ   

ಕೋಲ್ಕತ್ತ(ಪಿಟಿಐ): ಕಾಲೇಜು ಮಟ್ಟದಲ್ಲಿ ರಾಜಕಾರಣವನ್ನು ನಿಷೇಧಿಸಬೇಕೆಂದು ಮೃತ ಎಸ್‌ಫ್‌ಐ ಮುಖಂಡನ ಸಹೋದರಿ ಸುಮಿತ ಸೇನ್ ಗುಪ್ತ ಗುರುವಾರ ಆಗ್ರಹಿಸಿದ್ದಾರೆ.

ರಾಜಕೀಯ ಪಕ್ಷಗಳ ನಾಯಕರು ಅಮಾಯಕ ಕಾಲೇಜು ವಿದ್ಯಾರ್ಥಿಗಳನ್ನು   ರಾಜಕಾರಣಕ್ಕೆ ಎಳೆದು ತರುತ್ತಿದ್ದಾರೆ. ಅವರನ್ನು ಪ್ರತಿಭಟನೆ ಮತ್ತು ಹೋರಾಟಗಳಿಗೆ ಬಳಸಿಕೊಂಡು ಅವರ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಸುಮಿತ ಸೇನ್ ಗುಪ್ತ ಆರೋಪಿಸಿದ್ದಾರೆ.

ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದ ನನ್ನ ತಮ್ಮನನ್ನು ಸಿಪಿಐ(ಎಂ) ಪಕ್ಷದ ನಾಯಕರು ರಾಜಕೀಯ ಕಾರಣಗಳಿಗೆ ಬಳಸಿಕೊಂಡಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ವಿದ್ಯಾರ್ಥಿಗಳು ಮೊದಲು ವಿದ್ಯಾಬ್ಯಾಸದ ಕಡೆ ಗಮನ ಕೊಡಬೇಕು .ರಾಜಕೀಯ ರ್‍ಯಾಲಿಗಳಲ್ಲಿ ಭಾಗವಹಿಸಬಾರದು ಎಂದು ಅವರು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT