ADVERTISEMENT

ಕೀಳು ಟೀಕೆ: ಬಾದಲ್‌ ವಿಷಾದ

​ಪ್ರಜಾವಾಣಿ ವಾರ್ತೆ
Published 16 ಮೇ 2019, 19:36 IST
Last Updated 16 ಮೇ 2019, 19:36 IST

ಪನ್ನಿವಾಲಾ ಫಟ್ಟಾ: ‘ಚುನಾವಣೆಯ ಹೊತ್ತಿನಲ್ಲಿ ರಾಜಕೀಯ ಟೀಕೆಗಳು ಕೆಳಮಟ್ಟ ತಲುಪುತ್ತಿವೆ’ ಎಂದು ಶಿರೋಮಣಿ ಅಕಾಲಿದಳ (ಎಸ್ಎಡಿ) ಅಧ್ಯಕ್ಷ ಸುಖ್‌ಬೀರ್‌ ಬಾದಲ್ ವಿಷಾದಿಸಿದ್ದಾರೆ. ಎಸ್‌ಎಡಿ, ಬಿಜೆಪಿಯ ಹಳೆಯ ಮೈತ್ರಿ ಪಕ್ಷಗಳಲ್ಲಿ ಒಂದಾಗಿದೆ. ನರೇಂದ್ರ ಮೋದಿ ಅವರು ಪ್ರಬಲ ನಾಯಕ, ಚುನಾವಣೆಯ ಬಳಿಕ ಎನ್‌ಡಿಎಗೆ ಅವರಲ್ಲದೆ ಬೇರೆ ಆಯ್ಕೆಯೇ ಇಲ್ಲ ಎಂದೂ ಸುಖ್‌ಬೀರ್‌ ಹೇಳಿದ್ದಾರೆ.

‘ನಾವು ರಾಜಕಾರಣಿಗಳು ವೈರಿಗಳಲ್ಲ. ನಾವು ಭಾರತ–ಪಾಕಿಸ್ತಾನದಂತೆ ಇರಬಾರದು. ದುರದೃಷ್ಟವಶಾತ್‌ ಅಂಥದೇ ಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರತಿಯೊಬ್ಬರಿಗೂ ಅವರದೇ ದೃಷ್ಟಿಕೋನವಿದೆ. ಆದರೂ, ನಾವು ಭಾರತೀಯರು. ದೇಶದ ಹಿತಾಸಕ್ತಿಯೇ ನಮಗೆ ಮುಖ್ಯವಾಗಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆ ನಂತರ ಎನ್‌ಡಿಎಗೆ ಹೊಸ ಪಾಲುದಾರರ ಅಗತ್ಯವಿದೆಯೇ ಎಂಬ ಪ್ರಶ್ನೆಗೆ, ‘ಜನರು ಮೋದಿಗೆ ಮತ ನೀಡಲಿದ್ದಾರೆ. ದೇಶ ಮುನ್ನಡೆಸಲು ಅವರು ಸರಿಯಾದ ಆಯ್ಕೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT