ADVERTISEMENT

ಕೇಜ್ರಿವಾಲ್‌ ಮುಖಕ್ಕೆ ಮಸಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2013, 19:30 IST
Last Updated 18 ನವೆಂಬರ್ 2013, 19:30 IST
ನವದೆಹಲಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸುತ್ತಿದ್ದ ಆಮ್‌ ಆದ್ಮಿ ಪಕ್ಷದ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರ ಮುಖದ ಮೇಲೆ ಎರಚಿದ ಕಪ್ಪು ಬಣ್ಣವನ್ನು ಅಳಿಸುತ್ತಿರುವ ಪಕ್ಷದ ಮುಖಂಡ ಮನೀಶ್‌ ಸಿಸೋಡಿಯಾ (ಎಡಚಿತ್ರ). ಬಣ್ಣ ಎರಚಿದ ಬಿಜೆಪಿ ಕಾರ್ಯಕರ್ತ ನಚಿಕೇತ ವಾಘ್ರೇಕರ್‌	–ಪಿಟಿಐ ಚಿತ್ರ
ನವದೆಹಲಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸುತ್ತಿದ್ದ ಆಮ್‌ ಆದ್ಮಿ ಪಕ್ಷದ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರ ಮುಖದ ಮೇಲೆ ಎರಚಿದ ಕಪ್ಪು ಬಣ್ಣವನ್ನು ಅಳಿಸುತ್ತಿರುವ ಪಕ್ಷದ ಮುಖಂಡ ಮನೀಶ್‌ ಸಿಸೋಡಿಯಾ (ಎಡಚಿತ್ರ). ಬಣ್ಣ ಎರಚಿದ ಬಿಜೆಪಿ ಕಾರ್ಯಕರ್ತ ನಚಿಕೇತ ವಾಘ್ರೇಕರ್‌ –ಪಿಟಿಐ ಚಿತ್ರ   

ನವದೆಹಲಿ(ಪಿಟಿಐ): ಆಮ್‌ ಆದ್ಮಿ ಪಕ್ಷದ (ಎಪಿಪಿ) ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರ ಮುಖಕ್ಕೆ ಪತ್ರಿಕಾ­ಗೋಷ್ಠಿ­ಯಲ್ಲಿ ವ್ಯಕ್ತಿಯೊಬ್ಬ ಕಪ್ಪು ಬಣ್ಣ ಎರಚಿದ ನಾಟಕೀಯ ಬೆಳವಣಿಗೆ ಸೋಮವಾರ ನಡೆದಿದೆ.

ಅಣ್ಣಾ ಹಜಾರೆ ಅವರ ಬೆಂಬಲಿಗ ಮತ್ತು ಮಹಾರಾಷ್ಟ್ರದ ಬಿಜೆಪಿ ಕಾರ್ಯ­ಕರ್ತನೆಂದು ಹೇಳಿಕೊಂಡ ನಚಿಕೇತ ವಾಘ್ರೇ­ಕರ್‌ ಈ ಕೃತ್ಯ ಎಸಗಿದ್ದು, ‘ಕೇಜ್ರಿವಾಲ್‌ ಅವರು ಅಣ್ಣಾ ಹಜಾರೆ ಅವ­ರನ್ನು ತಮ್ಮ ಗುರು ಎನ್ನುತ್ತಾರೆ. ಆದರೆ, ಅವರು ಹಜಾರೆ ಮತ್ತು ಜನರಿಗೆ ದ್ರೋಹ ಬಗೆದಿದ್ದಾರೆ’ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸ್ಥಳಕ್ಕೆ ಬಂದ ನಚಿಕೇತ, ಗೋಷ್ಠಿಯಲ್ಲಿದ್ದ ಕೇಜ್ರಿವಾಲ್‌, ಪಕ್ಷದ ಮುಖಂಡರಾದ ಮನೀಶ್‌ ಸಿಸೋಡಿಯಾ, ಸಂಜಯ್‌ ಸಿಂಗ್‌, ಹಿರಿಯ ವಕೀಲರಾದ ಶಾಂತಿ ಭೂಷಣ್‌, ಪ್ರಶಾಂತ್‌ ಭೂಷಣ್‌ ಅವರ ಮೇಲೆ ಕಪ್ಪು ಬಣ್ಣದ (ಪೇಂಟ್‌) ಡಬ್ಬ ಎಸೆದು, ‘ಅಣ್ಣಾ ಹಜಾರೆ ಜಿಂದಾಬಾದ್‌’ ಎಂದು ಘೋಷಣೆ ಕೂಗಿದರು.

ಕೇಜ್ರಿವಾಲ್‌ ಅವರ ಮುಖದ ಮೇಲೆ ಕೊಂಚ ಬಣ್ಣ ಬಿತ್ತು. ಸಿಸೋಡಿಯಾ, ಪ್ರಶಾಂತ್‌ ಭೂಷಣ್‌ ಮತ್ತು ಸಂಜಯ್‌ ಸಿಂಗ್‌ ಅವರ ಮೇಲೂ ಸ್ವಲ್ಪ ಬಣ್ಣ ಬಿತ್ತು. ಗೋಷ್ಠಿಯಲ್ಲಿದ್ದ ಎಪಿಪಿ ಕಾರ್ಯ­ಕರ್ತರು ನಚಿಕೇತ ಅವರನ್ನು ಕೂಡಲೇ ಸ್ಥಳದಿಂದ ಹೊರಗೆಳೆದುಕೊಂಡು ಹೋದರು.

ನಂತರ ಈ ಘಟನೆ ಬಗ್ಗೆ ಯಾರ ಹೆಸರನ್ನೂ ಉಲ್ಲೇಖಿಸದೆ ಮಾತನಾಡಿದ ಕೇಜ್ರಿವಾಲ್‌, ‘ಎಪಿಪಿ ಜನಪ್ರಿಯತೆಯಿಂದ ಕಂಗಾಲಾಗಿರುವ ಕೆಲವರು ಈ ಕೆಲಸ ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.