ADVERTISEMENT

ಕೇರಳ: ಪೂಜೆ ನೆರವೇರಿಸಿದ ಮೊದಲ ದಲಿತ ಅರ್ಚಕ

ಪಿಟಿಐ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST

ಪಟ್ಟಣಂತಿಟ್ಟ: ಮಣಪ್ಪುರಂನಲ್ಲಿರುವ ಶಿವನ ದೇವಾಲಯದಲ್ಲಿ ಸೋಮವಾರ ಪೂಜಾಕಾರ್ಯ ನೆರವೇರಿಸುವ ಮೂಲಕ ಯದು ಕೃಷ್ಣನ್ ಅವರು ಕೇರಳದ ಮೊದಲ ದಲಿತ ಅರ್ಚಕರಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ಪಿ.ಕೆ. ರವಿ ಹಾಗೂ ಲೀಲಾ ಅವರ ಮಗನಾದ ಕೃಷ್ಣನ್ (22) 10 ವರ್ಷಗಳ ಕಾಲ ತಂತ್ರಶಾಸ್ತ್ರ ಅಧ್ಯಯನ ಮಾಡಿದ್ದಾರೆ. ಕೇರಳ ದೇವಸ್ವ ನೇಮಕಾತಿ ಮಂಡಳಿ 36 ಬ್ರಾಹ್ಮಣೇತರ ಅರ್ಚಕರನ್ನು ನೇಮಕಾತಿ ಮಾಡಲು ಈಚೆಗೆ ಶಿಫಾರಸು ಮಾಡಿತ್ತು. ಇದರಲ್ಲಿ ಆರು ಮಂದಿ ದಲಿತರು ಇದ್ದು, ಇವರಲ್ಲಿ ಕೃಷ್ಣನ್ ಸಹ ಸೇರಿದ್ದಾರೆ.

ತ್ರಿಶೂರು ಜಿಲ್ಲೆಯ ಕೊರಟ್ಟಿಯವರಾಗಿರುವ ಕೃಷ್ಣನ್ ಸಂಸ್ಕೃತದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದಾರೆ. ತಮ್ಮ 15ನೇ ವಯಸ್ಸಿನಲ್ಲಿ ಮನೆಯ ಸಮೀಪವೇ ಇದ್ದ ದೇಗುಲದಲ್ಲಿ ಪೂಜೆ ಮಾಡಲು ಆರಂಭಿಸಿದ್ದರು.

ADVERTISEMENT

ಐತಿಹಾಸಿಕವಾದ ಸಾರ್ವಜನಿಕ ದೇಗುಲ ಪ್ರವೇಶದ 81ನೇ ವಾರ್ಷಿಕೋತ್ಸವನವೆಂಬರ್‌ 12ಕ್ಕೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಕೃಷ್ಣನ್ ದಲಿತ ಅರ್ಚಕರಾಗಿದ್ದಾರೆ.

ತಿರುವಾಂಕೂರು ದೇವಸ್ವ ಮಂಡಳಿ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಕ ಮಾಡಲು ಶಿಫಾರಸು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.