ನವದೆಹಲಿ (ಐಎಎನ್‌ಎಸ್): ವ್ಯಾಪಾರ ವಹಿವಾಟು ಮತ್ತು ಹೂಡಿಕೆ ಪೈಪೋಟಿಯಿಂದಾಗಿ ದಕ್ಷಿಣ ಚೀನಾ ಸಾಗರದಲ್ಲಿ ಉದ್ಭವಿಸಿರುವ ಗಡಿ ವಿವಾದ ಮತ್ತು ದೂರಗಾಮಿ ಪರಿಣಾಮ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
ದಕ್ಷಿಣ ಚೀನಾ ಸಾಗರದಲ್ಲಿ ನೆಲೆಸಿರುವ ಪ್ರಕ್ಷುಬ್ಧ ಸ್ಥಿತಿ ಹಾಗೂ ಇತ್ತೀಚಿನ ಬೆಳವಣಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ ತನ್ನ ಸಾಗರ ಗಡಿಗಳ ಭದ್ರಪಡಿಸಿಕೊಳ್ಳಲು ಮುಂದಾಗಿದೆ.
ಆಸಿಯಾನ್ ರಾಷ್ಟ್ರಗಳಿಗೆ ತನ್ನ ಸಾಗರ ಮತ್ತು ಸಂಪರ್ಕ ಮಾರ್ಗಗಳನ್ನು ಮುಕ್ತವಾಗಿಡುವ ಮೂಲಕ ಭಾರತ ಪರಿಣಾಮಕಾರಿ ಬಾಂಧವ್ಯ ವೃದ್ಧಿಗೆ ಮುಂದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಅನಿಲ್ ವಾಧ್ವಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.