ADVERTISEMENT

ಚೀನಾ ಗಡಿಯ ಸೈನಿಕರಿಗೂ ಪೂರ್ಣ ಪಿಂಚಣಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ಚೀನಾ ಗಡಿಯ ಸೈನಿಕರಿಗೂ ಪೂರ್ಣ ಪಿಂಚಣಿ
ಚೀನಾ ಗಡಿಯ ಸೈನಿಕರಿಗೂ ಪೂರ್ಣ ಪಿಂಚಣಿ   

ನವದೆಹಲಿ: ಭಾರತ–ಚೀನಾ ವಿವಾದಿತ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮೃತಪಟ್ಟ ಅಥವಾ ಗಾಯಗೊಂಡ ಸೈನಿಕರ ಕುಟುಂಬಗಳಿಗೆ ಪೂರ್ತಿ ಪಿಂಚಣಿ ನೀಡಲು ರಕ್ಷಣಾ ಇಲಾಖೆ ನಿರ್ಧರಿಸಿದೆ.

ಕಳೆದ ವಾರ ಮಾಜಿ ಸೈನಿಕರ ಕಲ್ಯಾಣ ಇಲಾಖೆಯು 3,488 ಕಿಲೋ ಮೀಟರ್‌ ಉದ್ದದ ಭಾರತ–ಚೀನಾ ಗಡಿಯಲ್ಲಿ ಕಾರ್ಯ ನಿರ್ವಹಿಸುವ ಸೈನಿಕರ ಕುಟುಂಬಗಳಿಗೆ ‘ಸಂಪೂರ್ಣ ಕೌಟುಂಬಿಕ ಪಿಂಚಣಿ’ ಆದೇಶ ಹೊರಡಿಸಿತ್ತು.

ಇದುವರೆಗೆ ಭಾರತ–ಪಾಕಿಸ್ತಾನ ಗಡಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ಮಾತ್ರ ಸಂಪೂರ್ಣ ಪಿಂಚಣಿ ದೊರಕುತ್ತಿತ್ತು. ಈ ಯೋಜನೆಯಡಿ ಮೃತಪಟ್ಟ ಸೈನಿಕರು ಕೊನೆಯದಾಗಿ ಪಡೆದ ಸಂಬಳದ ಶೇ 100ರಷ್ಟನ್ನು ಕೌಟುಂಬಿಕ ಪಿಂಚಣಿ ನೀಡಲಾಗುತ್ತದೆ.

ADVERTISEMENT

ಈ ಸೌಲಭ್ಯ ಎಲ್‌ಎಸಿಯಲ್ಲಿ ನಿಯೋಜಿತರಾಗುವ ಸೈನಿಕರಿಗೆ ದೊರಕುತ್ತಿರಲಿಲ್ಲ. ಈ ಸೌಲಭ್ಯ ಎಲ್‌ಎಸಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೂ ದೊರಕಬೇಕು ಎಂದು ಸೇನೆ ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.