ADVERTISEMENT

ಚೆನ್ನೈನಲ್ಲಿ ಮಳೆ: ಎರಡು ವಿಮಾನ ಹೈದರಾಬಾದ್‌ ನಿಲ್ದಾಣದತ್ತ ಮಾರ್ಗ ಬದಲು, 10 ವಿಮಾನ ತಡವಾಗಿ ಪ್ರಯಾಣ

ಏಜೆನ್ಸೀಸ್
Published 1 ಅಕ್ಟೋಬರ್ 2017, 5:35 IST
Last Updated 1 ಅಕ್ಟೋಬರ್ 2017, 5:35 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಚೆನ್ನೈ: ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಎರಡು ವಿಮಾನಗಳು ಹೈದರಾಬಾದ್‌ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದು ಹತ್ತು ವಿಮಾನಗಳ ಸಂಚಾರ ತಡವಾಗಿದೆ.

ಚೆನ್ನೈನಲ್ಲಿ ಮೋಡ ಕವಿದ ವಾತಾವರಣ ಇದ್ದು, ಭಾರೀ ಮಳೆ ಬೀಳುತ್ತಿರುವುದರಿಂದ ಇಲ್ಲಿ ಇಳಿಯಬೇಕಿದ್ದ ಎರಡು ವಿಮಾನಗಳನ್ನು ಹೈದರಾಬಾದ್‌ನ ವಿಮಾನನಿಲ್ದಾಣದಲ್ಲಿ ಇಳಿಸಲು ಮಾರ್ಗ ಬದಲಿಸಲಾಗಿದೆ. ಉಳಿದಂತೆ 10 ವಿಮಾನಗಳ ಪ್ರಯಾಣ ಆರಂಭ ತಡವಾಗಲಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT