ADVERTISEMENT

ಜಯಾ ಸಾವು ಪ್ರಕರಣ: 15 ಮಂದಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 19:39 IST
Last Updated 30 ಅಕ್ಟೋಬರ್ 2017, 19:39 IST
ಜಯಾ ಸಾವು ಪ್ರಕರಣ:  15 ಮಂದಿಗೆ ನೋಟಿಸ್‌
ಜಯಾ ಸಾವು ಪ್ರಕರಣ: 15 ಮಂದಿಗೆ ನೋಟಿಸ್‌   

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಆರ್ಮುಗಸ್ವಾಮಿ ನೇತೃತ್ವದ ಸಮಿತಿಯು 15 ಜನರಿಗೆ ನೋಟಿಸ್ ಜಾರಿ ಮಾಡಿದೆ.

‘ನೋಟಿಸ್‌ಗೆ ಉತ್ತರ ಬಂದ ಬಳಿಕ ಪಾರದರ್ಶಕವಾಗಿ ತನಿಖೆ ಆರಂಭವಾಗಲಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಿತಿಗೆ ಈಗಾಗಲೇ 20 ದೂರುಗಳು ಬಂದಿವೆ’ ಎಂದು ತಿಳಿಸಿದ್ದಾರೆ.

ತನಿಖೆಯ ಭಾಗವಾಗಿ ಸಮಿತಿ ಸದಸ್ಯರು ಪೋಯಸ್‌ ಗಾರ್ಡನ್‌ನಲ್ಲಿರುವ ಜಯಾ ನಿವಾಸಕ್ಕೆ ತೆರಳಿ, 2016ರ ಸೆಪ್ಟೆಂಬರ್‌ 22ರ ರಾತ್ರಿ ಅಪೊಲೋ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಏನು ನಡೆಯಿತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ADVERTISEMENT

ಆ ದಿನ ರಾತ್ರಿ ಜಯಾ ಮನೆಯಲ್ಲಿ ಇದ್ದವರ ವಿಚಾರಣೆಯನ್ನೂ ನಡೆಸಲಿದೆ. ಜೈಲಿನಲ್ಲಿರುವ ಶಶಿಕಲಾ ಅವರ ವಿಚಾರಣೆ ನಡೆಸಲಿದೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ. ಜಯಾ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಶಶಿಕಲಾ ಅವರ ಜತೆಗಿದ್ದರು.

ಅಪೊಲೋ ಆಸ್ಪತ್ರೆಯಿಂದ ಜಯಾ ಅವರ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ವೈದ್ಯಕೀಯ ವರದಿಗಳು ಕೈಸೇರಿದ ಬಳಿಕ ಅರ್ಮುಗಸ್ವಾಮಿ ಅವರು, ಜಯಾಗೆ ಚಿಕಿತ್ಸೆ ನೀಡಿದ ಲಂಡನ್‌ನ ತಜ್ಞ ವೈದ್ಯ ರಿಚರ್ಡ್‌ ಬೇಲ್‌ ಹಾಗೂ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)  ತಜ್ಞರ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.