ADVERTISEMENT

ಜುಲೈ 1ರಿಂದ ಐಟಿ ರಿಟರ್ನ್‌, ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್‌ ಕಡ್ಡಾಯ: ಸಿಬಿಡಿಟಿ

ಏಜೆನ್ಸೀಸ್
Published 10 ಜೂನ್ 2017, 14:22 IST
Last Updated 10 ಜೂನ್ 2017, 14:22 IST
ಜುಲೈ 1ರಿಂದ ಐಟಿ ರಿಟರ್ನ್‌, ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್‌ ಕಡ್ಡಾಯ: ಸಿಬಿಡಿಟಿ
ಜುಲೈ 1ರಿಂದ ಐಟಿ ರಿಟರ್ನ್‌, ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್‌ ಕಡ್ಡಾಯ: ಸಿಬಿಡಿಟಿ   

ನವದೆಹಲಿ: ಜುಲೈ 1ರಿಂದ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಮತ್ತು ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐಟಿಆರ್‌) ಸಲ್ಲಿಸಲು ಆಧಾರ್‌ ಸಂಖ್ಯೆ ಕಡ್ಡಾಯ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಶನಿವಾರ ಹೇಳಿದೆ.

ಆಧಾರ್‌ ಕಡ್ಡಾಯಗೊಳಿಸುವ ಕಾನೂನಿನ ಸಿಂಧುತ್ವವನ್ನು ಸುಪ್ರೀಂಕೋರ್ಟ್‌ ಶುಕ್ರವಾರ ಎತ್ತಿಹಿಡಿದಿತ್ತು. ಆದರೆ, ಆಧಾರ್‌ ಸಂಖ್ಯೆ ಹೊಂದಿಲ್ಲದವರಿಗೆ ಇದರಿಂದ ತಾತ್ಕಾಲಿಕ ವಿನಾಯಿತಿಯನ್ನು ಸುಪ್ರೀಂಕೋರ್ಟ್‌ ನೀಡಿತ್ತು.

ಆದರೆ, ಸಿಬಿಡಿಟಿ ಮಾರ್ಗಸೂಚಿಯ ಪ್ರಕಾರ ಜುಲೈ 1ರಿಂದ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತು ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐಟಿಆರ್‌) ಸಲ್ಲಿಸಲು ಆಧಾರ್‌ ಸಂಖ್ಯೆ ಕಡ್ಡಾಯವಾಗಲಿದೆ.

ADVERTISEMENT

ಇದರಿಂದಾಗಿ ಆಧಾರ್‌ ಸಂಖ್ಯೆ ಹೊಂದಿಲ್ಲದವರು ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತು ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ ಸಲ್ಲಿಸಲು ಜೂನ್‌ 30 ಕೊನೆ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.