ADVERTISEMENT

ಜೆಇಇ ಅರ್ಹತಾ ಪಟ್ಟಿ ವಿಸ್ತರಣೆ

ಪಿಟಿಐ
Published 14 ಜೂನ್ 2018, 18:58 IST
Last Updated 14 ಜೂನ್ 2018, 18:58 IST

ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿರ್ದೇಶನದ ಮೇರೆಗೆ ಐಐಟಿ ಜಂಟಿ ಪ್ರವೇಶಾತಿ ಮಂಡಳಿ (ಜೆಎಬಿ) ಅರ್ಹತಾ ಪಟ್ಟಿ ವಿಸ್ತರಣೆ ಮಾಡಿದ್ದರಿಂದಾಗಿ, 31,980 ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಅರ್ಹರಾಗಿದ್ದಾರೆ.

‘ವಿದ್ಯಾರ್ಥಿಗಳು ಮತ್ತು ಐಐಟಿ ಮಂಡಳಿಯ ಮನವಿ ಪರಿಗಣಿಸಿ ಎಲ್ಲಾ ಸೀಟುಗಳು ಭರ್ತಿಯಾಗುವಂತೆ ನೋಡಿಕೊಳ್ಳುವ ಸಲುವಾಗಿ, ಜೆಇಇ ಅಡ್ವಾನ್ಸ್ಡ್‌ ನಡೆಸುವ ಐಐಟಿ ಕಾನ್ಪುರಕ್ಕೆ ಕಟ್ಟುನಿಟ್ಟಾಗಿ ಅರ್ಹತೆ ಆಧಾರದ ಮೇರೆಗೆ ಸೀಟುಗಳನ್ನು ಹಂಚುವಂತೆ ನಿರ್ದೇಶಿಸಿದ್ದೇನೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

ಗುರುವಾರ ಜೆಎಬಿ ಸಭೆ ನಡೆದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ಈ ವರ್ಷದ ಪ್ರವೇಶಾತಿಗೆ ಪೂರಕ ಅರ್ಹತಾ ಪಟ್ಟಿ ಬಿಡುಗಡೆಗೊಳಿಸುವಂತೆ ಸಚಿವಾಲಯ ಇದೇ ಮೊದಲ ಬಾರಿ ಐಐಟಿಗೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.