ನವದೆಹಲಿ (ಪಿಟಿಐ): 200 ಕೋಟಿ ರೂಪಾಯಿ ಮೊತ್ತದ ತೆರಿಗೆ ವಂಚಿಸಿರುವ ಖ್ಯಾತ ಸಿದ್ಧ ಆಹಾರ ತಯಾರಿಕಾ ಕಂಪೆನಿ ಕ್ಯಾಡ್‌ಬರಿ ಇಂಡಿಯಾ ಲಿಮಿಟೆಡ್ ವಿರುದ್ಧ ತೆರಿಗೆ ಇಲಾಖೆ ತನಿಖೆ ನಡೆಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ತೆರಿಗೆ ತನಿಖಾ ದಳದ ಪ್ರಧಾನ ನಿರ್ದೇಶನಾಲಯ ಈ ತನಿಖೆ ನಡೆಸಲಿದ್ದು, ಒಂದು ವೇಳೆ ತೆರಿಗೆ ವಂಚನೆ ಸಾಬೀತಾದರೆ ಅಷ್ಟೂ ಹಣವನ್ನು ಕಂಪೆನಿಯಿಂದ ವಸೂಲಿ ಮಾಡಲಾಗುವುದು' ಎಂದು ಹಣಕಾಸು ಖಾತೆ ರಾಜ್ಯ ಸಚಿವ ಎಸ್.ಎಸ್.ಪಳನಿಮಣಿಕಂ ಅವರು ಗುರುವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಈ ತೆರಿಗೆ ವಂಚನೆ ಪ್ರಕರಣ 2011-12ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದ್ದಾಗಿದೆ ಎಂದು ಅವರು ಹೇಳಿದ್ದಾರೆ.ತೆರಿಗೆ ವಂಚಿಸಿ ತನಿಖೆಗೆ ಒಳಗಾಗುತ್ತಿರುವ ಕ್ಯಾಡ್‌ಬರಿ ಕಂಪೆನಿ, ಹಿಮಾಚಲ ಪ್ರದೇಶದ ಬಡ್ಡಿಯಲ್ಲಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.