ADVERTISEMENT

ದಾವೂದ್‌ ಸಹಚರನ ಬಂಧನ

ಪಿಟಿಐ
Published 27 ಏಪ್ರಿಲ್ 2018, 19:30 IST
Last Updated 27 ಏಪ್ರಿಲ್ 2018, 19:30 IST

ಠಾಣೆ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ತಾರಿಕ್‌ ಪರ್ವಿನ್‌ ನನ್ನು ಪೊಲೀಸರು ಬಂಧಿಸಿದ್ದಾರೆ.

1998ರಲ್ಲಿ ನಡೆದ ಎರಡು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಲಾಗಿದೆ.

ತಾರಿಕ್‌ ಪರ್ವಿನ್‌ ನನ್ನು (51) ಮುಂಬೈನ ಎಲ್‌.ಟಿ. ನಗರದ ಅಶೋಕ ಶಾಪಿಂಗ್‌ ಸೆಂಟರ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕೇಬಲ್‌ ಅಪರೇಟರ್‌ ಮೊಹಮದ್‌ ಇಬ್ರಾಹಿಂ ಬಾಂಗ್ದಿವಾಲಾ (38), ಉದ್ಯಮಿ ಪರ್ವೇಜ್ ಅನ್ಸಾರಿ (41) ಕೊಲೆ ಪ್ರಕರಣದ ಆರೋಪ ಈತನ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.