ADVERTISEMENT

ದೇಶದಲ್ಲಿ ಶೇ 8ರಷ್ಟು ಮಳೆ ಕೊರತೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಈ ಬಾರಿ ಮುಂಗಾರು ಅವಧಿಯಲ್ಲಿ ದೇಶದಲ್ಲಿ ಶೇ 8ರಷ್ಟು ಮಳೆ ಕೊರತೆಯಾಗಿದೆ.

`ಸೆಪ್ಟೆಂಬರ್‌ನಲ್ಲಿ ಶೇ11ರಷ್ಟು ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಈ ಅವಧಿಯಲ್ಲಿ ಸರಾಸರಿ ಮಳೆ ಪ್ರಮಾಣ 173.5 ಮಿ.ಮೀ.ಗಿಂತಲೂ ಅಧಿಕ. ಅಂದರೆ 192 ಮಿ.ಮೀ. ಮಳೆ ಬಿದ್ದಿದೆ~ ಎಂದು ಹವಾಮಾನ ಇಲಾಖೆ ಹೇಳಿದೆ.
ಅಸ್ಸಾಂ, ಮೇಘಾಲಯ ಹಾಗೂ ಅರುಣಾಚಲ ಪ್ರದೇಶದಲ್ಲಿ ಮುಂದಿನ ಮೂರು ದಿನಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

 ಆಂಧ್ರ ಕರಾವಳಿ, ರಾಯಲಸೀಮೆ, ತೆಲಂಗಾಣ, ತಮಿಳುನಾಡಿನ ಉತ್ತರ ಕರಾವಳಿ ಹಾಗೂ ಕರ್ನಾಟಕದ ಒಳನಾಡಿನಲ್ಲಿ ಬುಧವಾರ ಭಾರಿ ಮಳೆಯಾಗಲಿದೆ ಎಂದೂ ಅದು ಹೇಳಿದೆ.

`ಇದೇ 20ರಿಂದ ಆರಂಭವಾಗಲಿರುವ ಹಿಂಗಾರು ಮಳೆ ಡಿಸೆಂಬರ್ ವರೆಗೆ ಮುಂದವರಿಯಲಿದೆ~ ಎಂದು ಇಲಾಖೆಯ ಮಹಾ ನಿರ್ದೇಶಕ ಲಕ್ಷ್ಮಣ್ ಸಿಂಗ್  ತಿಳಿಸಿದ್ದಾರೆ.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಈವರೆಗೆ 819.5 ಮಿ.ಮೀ. ಮಳೆ ಆಗಿದೆ. ಈ ಬಾರಿ ದೇಶದ ಶೇ 67ರಷ್ಟು ಪ್ರದೇಶದಲ್ಲಿ ವಾಡಿಕೆ ಅಥವಾ ಅದಕ್ಕಿಂತ ಹೆಚ್ಚು ಮಳೆ ಆಗಿದೆ.

ಮಳೆ ಕೊರತೆಯ ಪ್ರದೇಶಗಳು:  ಪಂಜಾಬ್ (ಶೇ  -46), ಹರಿಯಾಣ (ಶೇ  -39), ಉತ್ತರ ಕರ್ನಾಟಕ (ಶೇ  -35), ಗುಜರಾತ್ (ಶೇ  -28), ಸೌರಾಷ್ಟ್ರ ಹಾಗೂ ಕಛ್ (ಶೇ  -34), ಮಧ್ಯ ಮಹಾರಾಷ್ಟ್ರ (ಶೇ -25), ಮರಾಠವಾಡ (ಶೇ -33), ಪಶ್ಚಿಮ ಉತ್ತರಪ್ರದೇಶ (ಶೇ  -28), ದಕ್ಷಿಣ ಕರ್ನಾಟಕ ಹಾಗೂ ಕೇರಳ ( ಶೇ -24). ಈ ಬಾರಿ ಮುಂಗಾರು ಮೂರು ದಿನಗಳು ತಡವಾಗಿ ಆರಂಭವಾಗಿತ್ತು. ಜೂನ್ ಹಾಗೂ ಜುಲೈನಲ್ಲಿ ಶೇ 28ರಷ್ಟು ಮಳೆಯಾಗಿದ್ದು, ಶೇ 13ರಷ್ಟು ಮಳೆ ಕೊರತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.