ADVERTISEMENT

ದೋಕಲಾ, ರೋಹಿಂಗ್ಯಾ ಬಿಕ್ಕಟ್ಟು: ಸಂಸದೀಯ ಸಮಿತಿಯಿಂದ ಪರಿಶೀಲನೆ

ಪಿಟಿಐ
Published 10 ಅಕ್ಟೋಬರ್ 2017, 19:30 IST
Last Updated 10 ಅಕ್ಟೋಬರ್ 2017, 19:30 IST

ನವದೆಹಲಿ : ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಯು ದೋಕಲಾ, ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆ ಕುರಿತು ಪರಿಶೀಲಿಸಲಿದೆ.

ಮುಂದಿನ ತಿಂಗಳು ಸಮಿತಿ ಸಭೆ ನಡೆಸಲಿದ್ದು, ಈ ವೇಳೆ ವಿದೇಶಾಂಗ ನೀತಿ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಗಡಿಯ ಪರಿಸ್ಥಿತಿ ಸೇರಿದಂತೆ ಚೀನಾ–ಭಾರತ ಸಂಬಂಧ, ದೋಕಲಾ ಹಾಗೂ ರೋಹಿಂಗ್ಯಾ ಬಿಕ್ಕಟ್ಟು, ಮ್ಯಾನ್ಮಾರ್ ಜತೆಗಿನ ಸಂಬಂಧ ಸೇರಿದಂತೆ ಹಲವು ವಿಷಯಗಳು ಸಭೆಯಲ್ಲಿ ಚರ್ಚೆಯಾಗಲಿದೆ.

ADVERTISEMENT

ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು, ಬ್ರೆಕ್ಸಿಟ್‌ ಜಾರಿಯಿಂದ ಭಾರತದ ಮೇಲೆ ಮತ್ತು ಪಾಸ್‌ಪೋರ್ಟ್‌ ಜಾರಿ ವ್ಯವಸ್ಥೆ ಮೇಲೆ ಆಗುವ ಪರಿಣಾಮಗಳನ್ನು ಈ ವರ್ಷದ ಚರ್ಚೆಯ ವಿಷಯಗಳಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.